ಜಿಲ್ಲೆ

ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ

ವೀರೇಶ ಸೌದ್ರಿ

ಹುಬ್ಬಳ್ಳಿ: ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಲ್ಲಿನ ಶಕ್ತಿ ಕಾಲನಿಯ ನರಸಿಂಹರಾವ್ ಎಂಬ ವ್ಯಕ್ತಿಯಿಂದ ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡ ಪ್ರಕರಣ ಸಿಇಎನ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ.

ಒಎಲ್‌ಎಕ್ಸ್‌ನಲ್ಲಿ ಕೊಟ್ಟಿರುವ ಜಾಹೀರಾತು ನಂಬಿ ಮೊಬೈಲ್ ಫೋನ್ ಮೂಲಕ ಕರೆ ಮಾಡಿದ್ದ ನರಸಿಂಹರಾವ್‌ಗೆ ಅಪರಿಚಿತರು ದಾರಿ ತಪ್ಪಿಸಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ, 1,09,885 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.