ಹುಬ್ಬಳ್ಳಿ: ಲಿಂಗಾಯತ ಕೋಟಾದಡಿ ಎಫ್ಡಿಎ ನೌಕರಿ ಕೊಡಿಸುವುದಾಗಿ ನಂಬಿಸಿ ಇಲ್ಲಿನ ರಾಜೀವನಗರದ ಮಯೂರ ಎಂಬುವರಿಂದ ಫೋನ್ ಪೇ ಮೂಲಕ ವಿವಿಧ ಮೊಬೈಲ್ ಫೋನ್ ಸಂಖ್ಯೆಗೆ 81,900 ರೂ. ವರ್ಗಾಯಿಸಿಕೊಂಡು ಬೆಂಗಳೂರು ಮೂಲದ ಮೂವರು ವಂಚಿಸಿದ್ದಾರೆ. ಶ್ರೀನಿವಾಸಮೂರ್ತಿ, ಕೃಷ್ಣಪ್ರಸಾದ, ಪ್ರಭು ಎಂಬುವರ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.