ಜಿಲ್ಲೆ

ಲೋನ್ ಕೊಡುವುದಾಗಿ 6.14 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಲೋನ್ ಕೊಡುವುದಾಗಿ ನಂಬಿಸಿ ಪ್ಯಾನ್‌ಕಾರ್ಡ್, ಆಧಾರ್ ಕಾರ್ಡ್ ಪಡೆದು ನಗರದ ವ್ಯಕ್ತಿಯೊಬ್ಬರಿಂದ 6.14 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ನಗರದ ಖಾಜಾಸಾಬ್ ನದಾಫ್ ವಂಚನೆಗೆ ಒಳಗಾದವರು. ಲೋನ್ ಆಮಿಷವೊಡ್ಡಿದ ವಂಚಕರು, ಬ್ಯಾಂಕ್‌ಗೆ ಅಗತ್ಯವಿರುವ ಕಾರ್ಡ್‌ಗಳನ್ನು ಪಡೆದಿದ್ದಾರೆ. ಆ ನಂತರ ನದಾಫ್ ಅವರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.