ಹುಬ್ಬಳ್ಳಿ: ಹಣ ಹೂಡಿಕೆ ಹೆಸರಿನಲ್ಲಿ ನಂಬಿಸಿದ ವಂಚಕರು, ಧಾರವಾಡದ ವ್ಯಕ್ತಿಯಿಂದ 7.28 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಆನಂದ ವಂಚನೆಗೆ ಒಳಗಾದವರು. ಅಮಿತ ಗುಪ್ತಾ, ಎಮಿಲಾ ಸಿಂಗ್ ಎಂಬುವವರು ಲಾಂಗ್ ಕ್ರಿಕ್ ಕ್ಯಾಪಿಟಲ್88 ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರಿಸಿ ಆನಂದ ಅವರನ್ನು ಸೇರಿಸಿದ್ದಾರೆ. ನಂತರ ಲಾಭದಾಸೆ ತೋರಿಸಿ ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.