ಜಿಲ್ಲೆ

ಲೋಕಸಭೆ ಟಿಕೆಟ್ ಹೆಸರಲ್ಲಿ ವಂಚನೆ, ಪ್ರಲ್ಹಾದ ಜೋಶಿ ಕುಟುಂಬದ ಮೇಲಿನ ಆಪಾದನೆಗೆ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ಏನು ಗೊತ್ತಾ?

ವಿಜಯಪುರ: ಲೋಕಸಭೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬದ ಮೇಲೆ ಬಂದಿರುವ ಆಪಾದನೆ ಖೇದಕರ. ದುರ್ದೈವದ ಸಂಗತಿ ಎಂದು ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಜೋಶಿ ಕುಟುಂಬಸ್ಥರು ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ದೂರು ದಾಖಲಾದ ತಕ್ಷಣ ತಲೆ ಮರೆಯಿಸಿಕೊಳ್ಳುವ ಬದಲು ಸ್ಪಷ್ಟನೆ ನೀಡಬಹುದಿತ್ತು. ಇದೀಗ ಜೋಶಿ ಅವರು ಅದಕ್ಕೂ ತಮಗೂ ಸಂಬಂಧವಿಲ್ಲ. ತಂಗೀನೇ ಇಲ್ಲ, ಸಹೋದರರ ಜೊತೆ ಮಾತುಕತೆ ಇಲ್ಲ…ಹೀಗೆ ಏನೇನೋ ಹೇಳಿದ್ದಾರೆ. ಅದೆಲ್ಲ ಬಿಟ್ಟು ತನಿಖೆ ಎದುರಿಸಲಿ. ಅದನ್ನು ಬಿಟ್ಟು ತಲೆ ಏಕೆ ಮರೆಯಿಸಿಕೊಂಡರು ಎಂಬುದು ಗೊತ್ತಿಲ್ಲ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಈ ಪ್ರಕರಣದಿಂದ ಬೇಲಿನೆ ಎದ್ದು ಹೊಲೆ ಮೇಯ್ದಂತೆ ಆಯ್ತ ? ಎಂದು ಭಯ ಆಗುತ್ತಿದೆ. ಹಿಂದುತ್ವದ ಹೆಸರು ಹೇಳಿಕೊಂಡು ಮಾಡಬಾರದನ್ನು ಮಾಡುವವರ ಬಗ್ಗೆ ಸಮಾಜ ಎಚ್ಚರ ವಹಿಸಬೇಕೆಂದರು.