ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಮರೆಮಾಚಿಸಲು ಹಿಂಭಾಗದ ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಹಾಕಿದ್ದ ಬೈಕ್ ಸವಾರರನ್ನು ಪತ್ತೆ ಹಚ್ಚಿರುವ ವಿವಿ ಪುರಂ ಸಂಚಾರ ಠಾಣೆ ಪೊಲೀಸರು, ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ-1: ಪಡುವಾರಹಳ್ಳಿ ಜಂಕ್ಷನ್‌ನಲ್ಲಿ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಸವಾರ ತನ್ನ ವಾಹನದ ನೋಂದಣಿ ಸಂಖ್ಯೆ ಯನ್ನು ಮರೆಮಾಚಿಸಲು ಹಿಂಭಾಗದ ನಂಬರ್ ಪ್ಲೇಟ್‌ನಲ್ಲಿ ಒಂದು ಸಂಖ್ಯೆಗೆ ಸ್ಟಿಕ್ಕರ್ ಹಾಕಿಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದನು.
ಪ್ರಕರಣ-2: ಮತ್ತೊಂದು ಪ್ರಕರಣದಲ್ಲಿ ಟೆಂಪಲ್ ರಸ್ತೆಯಲ್ಲಿ ಸುಜುಕಿ ಆಕ್ಸಿಸ್ ಸ್ಕೂಟರ್ ಸವಾರ ತನ್ನ ವಾಹನದ ನೋಂದಣಿ ಸಂಖ್ಯೆಯನ್ನು ಮರೆಮಾಚಿಸಲು ಹಿಂಭಾಗದ ನಂಬರ್ ಪ್ಲೇಟ್‌ನಲ್ಲಿ ಒಂದು ಸಂಖ್ಯೆಗೆ ಸ್ಟಿಕ್ಕರ್ ಹಾಕಿಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದನು.
ಈ ಇಬ್ಬರು ವಾಹನ ಸವಾರರನ್ನು ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪತ್ತೆ ಮಾಡಿ, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.