ಉಡುಪಿ: ಮಲ್ಪಿ ಅಸೆಟ್ ಪೋರ್ಟ್ಪೋಲಿಯೋ ಬಗ್ಗೆ ಅಪರಿಚಿತನ ಮಾತು ನಂಬಿದ ಮಹಿಳೆಯೊಬ್ಬರು 12 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಿ.ಪಿ ನಗರ ನಿವಾಸಿ ಸುಪ್ರಜಾ ಟಿ.ಎ (34) ಅವರಿಗೆ ಅ. 27ರಂದು ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಹಣ ದ್ವಿಗುಣಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಉತ್ತೀಜಿತರಾದ ಅವರು ಮೂರು ಕಂತುಗಳಲ್ಲಿ ಎಸ್.ಬಿ.ಐ ಖಾತೆಯಿಂದ ಒಟ್ಟು ರೂ 12,04,400 ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಹಣ ಪಡೆದುಕೊಂಡ ವ್ಯಕ್ತಿಯು ಯಾವುದೇ ಮಾಹಿತಿಯನ್ನು ನೀಡದೇ, ಹಣವನ್ನು ವಾಪಾಸು ನೀಡದೇ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿ ಮೋಸ ಮಾಡಿದ್ದಾನೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.