ಉಡುಪಿ: ಅಪರಿಚಿತ ಕರೆಗಳಿಗೆ ಸ್ಪಂದಿಸಿ ಹಣದ ವ್ಯವಹಾರ ಮಾಡಬೇಡಿ ಎಂದು ಪೊಲೀಸರು ಎಷ್ಟು ಬಾರಿ ಹೇಳಿದರೂ ಜನ ಬುದ್ಧಿಕಲಿಯುತ್ತಿಲ್ಲ. ಉಡುಪಿಯಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವ್ಯವಹಾರ ಮಾಡಿಕೊಂಡಿದ್ದ ಉದ್ಯಮಿಯೊಬ್ಬರು ಅಪರಿಚಿತ ಕೇಳಿದ ಎಂದು 3 ಲಕ್ಷ ರೂ. ಕೊಟ್ಟು ಕೈಸುಟ್ಟುಕೊಂಡಿದ್ದಾರೆ.
ಮಂದಾರ್ತಿ ಹೆಗ್ಗುಂಜೆ ಗ್ರಾಮದ ಪ್ರಮೋದ್ ಕುಮಾರ್ ಶೆಟ್ಟಿ ಹಣಕಳೆದುಕೊಂಡವರು. ಇವರಿಗೆ ಭಾನುವಾರ ಬೆಳಗ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಯೂರೋ ಬಾಂಡ್ ಮಾಲೀಕ ರಾಜೇಶ್ ಶಾ ಎಂಬುದಾಗಿ ಪರಿಚಯಿಸಿಕೊಂಡು, ತನ್ನ ಮಗನಿಗೆ ಕಾರವಾರ - ಗೋವಾ ಮಾರ್ಗದ ನಡುವೆ ರಸ್ತೆ ಅಪಘಾತವಾಗಿದ್ದು, ಆತನನ್ನು ಏರ್‌ಲಿಪ್ಟ್ ಮೂಲಕ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲು ತುರ್ತಾಗಿ 3 ಲಕ್ಷ ರೂ. ಹಣ ಬೇಕಾಗಿರುವುದರಿಂದ ಆ್ಯಕ್ಸಿಸ್ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಕೋರಿದ್ದಾರೆ. ಇದನ್ನು ನಂಬಿದ ಪ್ರಮೋದ್ ತನ್ನ ಖಾತೆಯಿಂದ ಹಾಗೂ ತನ್ನ ಗೆಳೆಯರಿಂದ ಒಟ್ಟು ಸೇರಿಸಿ 3 ಲಕ್ಷ ರೂ. ಹಣವನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ನಂತರ ಹಣ ವಾಪಾಸು ಕೇಳಲು ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿದ್ದು, ತಾನು ಮೋಸ ಹೋದ ವಿಚಾರ ತಿಳಿದು ಸೆನ್ ಅಪರಾಧ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಾಗಿದೆ.