ಹುಬ್ಬಳ್ಳಿ: ವಿದ್ಯಾರ್ಥಿ ಹಾಗೂ ಖಾಸಗಿ ಕಂಪನಿಯ ಸಿಬ್ಬಂದಿಯೊಬ್ಬರಿಗೆ ಹೂಡಿಕೆ ಹೆಸರಿನಲ್ಲಿ ಅಪರಿಚಿತರು ನಂಬಿಸಿದ್ದು, ಅವರಿಂದ 7.79 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಧಾರವಾಡದ ಅಖಿಲೇಶ, ನಿಖಿತಾ ವಂಚನೆಗೆ ಒಳಗಾದವರು. ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿರುವ ಅಪರಿಚಿತರು ಟೆಲಿಗ್ರಾಂ ಮೂಲಕ ವಿವಿಧ ಗ್ರೂಪ್‌ಗೆ ಸೇರಿಸಿ ಹೂಡಿಕೆ ಮಾಡಿಸಿದ್ದಾರೆ. ಮೊದಲು ಲಾಭ ಕೊಟ್ಟಂತೆ ಮಾಡಿ, ನಂತರ 7,79,995 ರೂ. ವರ್ಗಾಯಿಸಿಕೊಂಡು ವಂಚಿಸಿದ್ದ ಕುರಿತು ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.