ಜಿಲ್ಲೆ

ಲಾಭದಾಸೆ ತೋರಿಸಿ ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಆರಂಭಿಸುತ್ತಿರುವ ಹೊಸ ಆಸ್ಪತ್ರೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ 1.71 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಸುನೀಲಕುಮಾರ ವಂಚನೆಗೆ ಒಳಗಾದವರು. ಕೊಪ್ಪಳ ಜಿಲ್ಲೆ ಭಾಗ್ಯನಗರದ ಕಿರಣ, ಸುಚಿತ್ರಾ ಎಂಬುವರು ಸುನೀಲಕುಮಾರಗೆ ಮೊದಲು ವಾಟ್ಸ್ ಆ್ಯಪ್‌ನಲ್ಲಿ ಪರಿಚಯವಾಗಿದ್ದಾರೆ. ಆ ಮೇಲೆ ದೂರವಾಣಿ ಮೂಲಕ ಸಂಪರ್ಕಿಸಿ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ 1,71,335 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸುನೀಲಕುಮಾರ, ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.