ಜಿಲ್ಲೆ

ಲಾಭದಾಸೆ ತೋರಿಸಿ ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಯೂಟ್ಯೂಬ್​ನಲ್ಲಿ ಲೈಕ್ ಮಾಡಿ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಹುಬ್ಬಳ್ಳಿ ಇಂದ್ರಾನಗರದ ಶಿವ ಎನ್ನುವರಿಂದ 2.67 ಲಕ್ಷ ರೂ. ಆನ್​ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ವಾಟ್ಸ್​ಆಪ್ ಮೂಲಕ ಶಿವ ಎನ್ನುವರನ್ನು ಪರಿಚಯಿಸಿಕೊಂಡು 150 ರೂ. ಲಾಭ ಕೊಟ್ಟು ಹಣದಾಸೆ ತೋರಿಸಿದ್ದಾರೆ. ನಂತರ ವಿವಿಧ ಖಾತೆಗಳಿಂದ 2,67,970 ರೂ. ವರ್ಗಾಯಿಸಿಕೊಂಡಿದ್ದಾರೆ. ಸಿಎಇನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ