ರಾಮನಗರ: ಕೆನಡಾದಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ 6 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ರಾಮನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ಚನ್ನಪಟ್ಟಣದ ತಿರುಚೆಂಗೇರಿ ಬೀದಿಯ ಸಿ ವಿ ಮಹೇಶ್ ಹಣ ಕಳೆದುಕೊಂಡವರು. ಇವರ ಮಗ ಹೋಟೆಲ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದುಕೊಂಡು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೇರಳದ ಮೂಲಕ ಖಾಸಗಿ ಸಂಸ್ಥೆಯೊಂದು ಕೆನಾಡದಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ, 12 ಲಕ್ಷ ರೂ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಂಬಿ ಮಹೇಶ್ ಅವರ ಪುತ್ರ 6 ಲಕ್ಷ ರೂ.ಗಳನ್ನು ಸುನಿರಾ ಶಾಮೀರ್ ಎನ್ನುವರ ಖಾತೆಗೆ ಹಾಕುವಂತೆ ತಂದೆಗೆ ಹೇಳಿದ್ದಾರೆ. ಇದರಂತೆ ಮಹೇಶ್ 6 ಲಕ್ಷ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ಆದರೆ, ಮಹೇಶ್ ಅವರ ಮಗನಿಗೆ ಕೆನಡಾದಲ್ಲಿ ಕೆಲಸ ಸಿಗಲೇ ಇಲ್ಲ. ನಂತರ ಮೋಸ ಹೋಗಿರುವುದು ತಿಳಿದು, ಕೇರಳದ ಎರ್ನಾಕುಲಂಗೆ ಹೋಗಿ ವಿಚಾರಣೆ ಮಾಡಲಾಗಿ, ಕಂಪನಿಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ ಎನ್ನುವುದು ಪತ್ತೆಯಾಗಿದೆ. ಇಲ್ಲಿ ಹೋಗಿ ವಿಚಾರಿಸಿದಾಗ ಶ್ರೀನಿವಾಸ್ ಎನ್ನುವರು 6 ಲಕ್ಷ ರೂ ವಾಪಾಸ್ ಮಾಡುವ ‘ರವಸೆಯನ್ನು ನೀಡಿದ್ದರು. ಆದರೆ ಹಣ ವಾಪಾಸಾತಿ ಮಾಡದ ಹಿನ್ನೆಲೆಯಲ್ಲಿ ಮಹೇಶ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.