ದೊಡ್ಡಬಳ್ಳಾಪುರ : ಶಾಲೆಯಲ್ಲಿ ಆಟವಾಡುವಾಗ ಬಿದ್ದು ಐದನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಕೈ ಮುರಿದುಕೊಂಡಿದ್ದು, ಆದರೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯದೆ ರ್ನಿಲಸಲಾಗಿದೆ ಎನ್ನಲಾಗಿದ್ದು, ಗಾಯಗೊಂಡ ವಿದ್ಯಾರ್ಥಿಯ ಪಾಲಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ತಂದೆ ಶಿವಕುಮಾರ್ ಮಾತನಾಡಿ, ಟನೆ ಬಗ್ಗೆ ಶಾಲೆಯಲ್ಲಿ ವಿಚಾರಿಸಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಮೂಳೆ ಮುರಿದಿದ್ದರೂ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಸಣ್ಣ ಮರದ ಕಡ್ಡಿ ಕಟ್ಟಿ ಸುಮ್ಮನಾಗಿದ್ದಾರೆ. ಅವರ ಮಕ್ಕಳಾಗಿದ್ದರೆ ಹೀಗೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು. ನಾವು ಹೊಟ್ಟೆ ಬಟ್ಟೆ ಕಟ್ಟಿ ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.
ನಿಮ್ಮ ಮಕ್ಕಳು ನಮ್ಮ ಜವಾಬ್ದಾರಿ, ನಮ್ಮನ್ನು ನಂಬಿ ಅಂತ ಹೇಳಿಕೊಳ್ಳುವ ಶಾಲೆಗಳು, ಶಾಲೆಯ ಪ್ರಾರಂಭದಿಂದ ಪ್ರತಿಯೊಂದಕ್ಕೂ ಹಣ ನೀಡಿ ಎಂದು ಒತ್ತಾಯಿಸುತ್ತವೆ. ಶಾಲೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಮಕ್ಕಳಿಗೆ ಸಮಸ್ಯೆ ಉಂಟಾದಾಗ ನಮಗೂ ಮಕ್ಕಳಿಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಕಾಶ್ ಅವರನ್ನು ಕೇಳಿದರೆ ಮಗುವಿಗೆ ಗಾಯವಾದರೆ ನಾನೇನು ಮಾಡಲಿ, ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಗದರಿ ನಮ್ಮನ್ನು ಹೊರಗೆ ಕಳುಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿ ಪಾಲಕರು ಅಳಲು ತೋಡಿಕೊಂಡರು.
ಮಗು ಬಿದ್ದು ಗಾಯ ಮಾಡಿ ಕೊಂಡಿರುವ ವಿಚಾರವನ್ನು ಪಾಲಕರಿಗೆ ತಿಳಿಸಿದ್ದೇವೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ನಮ್ಮ ಕೆಲಸವಲ್ಲ. ಲಿಖಿತವಾಗಿ ದೂರು ನೀಡಿದರೆ ನೋಡೋಣ ಬಿಡಿ. | ಪ್ರಕಾಶ್, ಕಾರ್ಯದರ್ಶಿ ಕೊಂಗಾಡಿಯಪ್ಪ ಶಾಲೆಯ ಆಡಳಿಯ ಮಂಡಳಿ