ಕೇಂದ್ರ ಕೃಷಿ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್  
ಜಿಲ್ಲೆ

ಎಫ್‌ಪಿಒಗಳಿಂದ ಹೊಸ ಕೃಷಿ ಕ್ರಾಂತಿ ಸೃಷ್ಟಿ

ಶಿವಮೊಗ್ಗ: ಶಿವಮೊಗ್ಗದಲ್ಲಿನ ಎಫ್‌ಪಿಒ (ರೈತರ ಉತ್ಪಾದಕ ಸಂಸ್ಥೆ)ಗಳನ್ನು ಕಂಡು ಖುಷಿಯಾಯಿತು. ಎಫ್‌ಪಿಒ ಇಡೀ ದೇಶದಲ್ಲಿ ಹೊಸ ಕೃಷಿ ಕ್ರಾಂತಿಯನ್ನು ಸೃಷ್ಟಿ ಮಾಡಬಲ್ಲವು ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ನಗರದ ಪಿಇಎಸ್‌ನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಅನ್ವೇಷಣಾ ಇನ್ನೋವೇಷನ್ ಆ್ಯಂಡ್ ಎಂಟರ್‌ಫ್ರೀನ್ಯೋರಲ್ ಫೋರಂನಿಂದ ಮಲೆನಾಡು ಸ್ಟಾರ್ಟಪ್ ಸಮ್ಮೇಳನ-2025 ಉದ್ಘಾಟಿಸಿ ಮಾತನಾಡಿದ ಅವರು, ಎಫ್‌ಪಿಒಗಳು ಬ್ರಾೃಂಡ್ ಆಗುತ್ತಿದ್ದು ಮಾರುಕಟ್ಟೆ, ಮೌಲ್ಯವರ್ಧನೆ ಹೆಚ್ಚಿಸುವ ಮೂಲಕ ಹೊಸ ಸ್ಟಾರ್ಟಪ್‌ಗಳನ್ನು ಆರಂಭಿಸಬಹುದು. ವಿಶೇಷವಾಗಿ ವಿದ್ಯಾರ್ಥಿಗಳು, ಯುವಸಮೂಹದಲ್ಲಿ ಹೊಸ ಹೊಸ ಆಲೋಚನೆಗಳಿವೆ. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರಲು ಬಂಡವಾಳವಿಲ್ಲ. ಅಂಥವರಿಗೆ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಆರ್ಥಿಕ ನೆರವು ನೀಡಲಾಗುವುದು ಎಂದರು.

ಮಾಮಾ ಮತ್ತೆ ಮತ್ತೆ ಬರ್ತಾರೆ: ಯುವಜನರು ಐಡಿಯಾ ಜತೆಗೆ ಬನ್ನಿ. ಹೊಸ ಐಡಿಯಾಗಳನ್ನು ನನಗೆ ತಿಳಿಸಿ. ಖಂಡಿತವಾಗಿಯೂ ಸಹಾಯ ಮಾಡುತ್ತೇನೆ. ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬಂದಿದ್ದೇನೆ. ಇದೇ ಕೊನೆಯಲ್ಲ. ನೀವು ಹೊಸ ಹೊಸ ಆಲೋಚನೆಗಳೊಂದಿಗೆ ಬಂದು ಆಹ್ವಾನಿಸಿದರೆ ನಿಮ್ಮ ಮಾಮಾ ಮತ್ತೆ ಮತ್ತೆ ಶಿವಮೊಗ್ಗಕ್ಕೆ ಬರುತ್ತಾರೆ. ಆ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದರು.