ಜಿಲ್ಲೆ

ರೇಷ್ಮಾಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ

ಪ್ರಸಿನ್ ಕೆ.ಆರ್

ಹಲಗೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜೆ.ಜೆ.ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಎಚ್.ಎನ್. ರೇಷ್ಮಾ 615/625 ಅಂಕಗಳನ್ನು ಗಳಿಸಿದ್ದು, ಮರು ಮೌಲ್ಯಮಾಪನದಲ್ಲಿ ಕನ್ನಡದಲ್ಲಿ ಮೂರು ಮತ್ತು ವಿಜ್ಞಾನದಲ್ಲಿ 3 ಒಟ್ಟು ಆರು ಅಂಕ ಹೆಚ್ಚು ಪಡೆದು 621/625 ಅಂಕಗಳನ್ನು ಗಳಿಸಿದ್ದು ರಾಜ್ಯಕ್ಕೆ ನಾಲ್ಕನೆಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.