ಹಸುವಿಗೆ ಶಸöಚಿಕಿತ್ಸೆ ನಡೆಸಿ ಕರುವನ್ನು ಹೊರತೆಗೆದ ಪಶು ವೈದ್ಯ ಡಾ. ಜಿ.ಆನಂದ್. ಚಂದನ್, ಅನ್ನಪೂರ್ಣಾ, ಯೋಗೇಂದ್ರ, ಶಿವಮೂರ್ತಿ ಇದ್ದÀರು. 
ಜಿಲ್ಲೆ

ಹಸುವಿಗೆ ನಾಲ್ಕನೇ ಬಾರಿ ಸಿಸೇರಿಯನ್

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ತ್ರ‍್ಯಂಬಕಪುರ ಗ್ರಾಪಂನ ಅಕ್ಲಾಪುರ ಗ್ರಾಮದ ಉಮೇಶ್ ಬಿಸಿನಗದ್ದೆ ಅವರ ಮಲೆನಾಡುಗಿಡ್ಡ ಹಸುವಿಗೆ ನಾಲ್ಕನೇ ಬಾರಿ ಶಸöಚಿಕಿತ್ಸೆ ಮೂಲಕ ಕರುವನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. 2020ರಲ್ಲಿ ಹೆಣ್ಣು ಕರು, 2021ರಲ್ಲಿ ಗಂಡು ಕರು, 2022ರಲ್ಲಿ ಹೆಣ್ಣು ಕರುವನ್ನು ಶಸöಚಿಕಿತ್ಸೆ ಮೂಲಕವೇ ಹೊರತೆಗೆಯಲಾಗಿತ್ತು, ಇದೀಗ ಕೋಣಂದೂರಿನ ಹಿರಿಯ ಪಶು ವೈದ್ಯ ಡಾ. ಜಿ.ಆನಂದ್ ಅವರು ನಾಲ್ಕನೇ ಬಾರಿಗೆ ಶಸöಚಿಕಿತ್ಸೆ ಮೂಲಕವೇ ಗಂಡು ಕರುವನ್ನು ಹೊರತೆಗೆದಿದ್ದಾರೆ. ಹಸು ಧರೆಯಿಂದ ಜಾರಿ ಬಿದ್ದು ಸೊಂಟದ ಮೂಳೆ ಮುರಿದ ಪರಿಣಾಮ ಪ್ರತಿ ಬಾರಿಯೂ ಕರು ಹಾಕಲು ಕಷ್ಟಪಡುತ್ತದೆ. ಹಾಗಾಗಿ ಶಸöಚಿಕಿತ್ಸೆ ಮೂಲಕ ಕರುವನ್ನು ಹೊರತೆಗೆಯಲಾಗುತ್ತಿದೆ. ಶಸöಚಿಕಿತ್ಸೆಗೆ ನೌಕರರಾದ ಚಂದನ್, ಅನ್ನಪೂರ್ಣಾ, ಯೋಗೇಂದ್ರ, ಶಿವಮೂರ್ತಿ ಹಾಗೂ ಗ್ರಾಮಸ್ಥರು ಸಹಕರಿಸಿದರು.