ಜಿಲ್ಲೆ

ವಿವಿಧ ಭಾಗಗಳಲ್ಲಿ ಕಳವಾಗಿದ್ದ 14 ದ್ವಿಚಕ್ರ ವಾಹನಗಳ ವಶ, ಆಂಧ್ರದ ಕಳ್ಳನ ಬಂಧನ

ಚಿಕ್ಕಬಳ್ಳಾಪುರ: ವಿವಿಧ ಭಾಗಗಳಲ್ಲಿ ಕಳವಾಗಿದ್ದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಆಂಧ್ರದ ಕಳ್ಳನೊಬ್ಬನನ್ನು ಬಂಧಿಸಿದ್ದು ಉಳಿದ ಇಬ್ಬರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

ಹಿಂದೂಪುರದ ಮನೋಜ್ ಕುಮಾರ್ (23) ಬಂಧಿತ. ಪೆನುಗೊಂಡದ ಮಾವತ್ತೂರು ಗ್ರಾಮದ ಬೋಯಾ ಹರೀಶ್ (23) ಹಾಗೂ ಹಿಂದೂಪುರದ ಆಟೋ ನಗರ್ ದ ಜಮೀರ್ (24) ನಾಪತ್ತೆಯಾಗಿದ್ದು ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಬಂಧಿತನಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಬೆಂಗಳೂರು ನಗರ ಹಾಗೂ ಹಿಂದೂಪರದ ವಿವಿಧ ಕಡೆ ಕದ್ದಿದ್ದ ನಾನಾ ಕಂಪನಿಗಳ 14 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಜ.5 ರಂದು ಚಿಕ್ಕಬಳ್ಳಾಪುರ ತಾಲೂಕಿನ ದೇವಸ್ಥಾನಹೊಸಹಳ್ಳಿಯ ಶಿವಕುಮಾರ್ ಎಂಬುವರಿಗೆ ಸೇರಿದ್ದ ಬೈಕು ಕಳ್ಳತನಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ನಡುವೆ ಸೇಟ್ ದಿನ್ನೇ ಬಳಿ ಸಿಬ್ಬಂದಿ ಮನೋಜ್ ಕುಮಾರ್ರನ್ನು ಬಂಧಿಸಿ, ವಿಚಾರಣೆ ಕೈಗೊಂಡಾಗ ಹಲವು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.