ಮಡಿಕೇರಿ: ಹಸು ಮತ್ತು ಎಮ್ಮೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪಲು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ವಿರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ನಿವಾಸಿ ಕೆ.ಎಂ.ಉಬೈದ್ (37), ಪೊನ್ನಂಪೇಟೆ ತಾಲೂಕು ಸೀತಾ ಕಾಲನಿ ನಿವಾಸಿ ಗಜನ್ ಗಣಪತಿ (25), ಪೊನ್ನಂಪೇಟೆ ತಾಲೂಕು ಬೇಗೂರು ನಿವಾಸಿ ಸಿ.ಇ. ಹನೀಫ (36) ಹಾಗೂ ಕೇರಳದ ಮಾನಂದವಾಡಿ ನಿವಾಸಿ ಅಜನಸ್ (21) ಬಂಧಿತ ಆರೋಪಿಗಳು.
7000 ನಗದು, ಕೃತ್ಯಕ್ಕೆ ಬಳಸಿದ್ದ ವಾಹನಗಳು, 3 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೂ. 24ರಂದು ನೋಕ್ಯ ಗ್ರಾಮದ ನಿವಾಸಿ ಎ.ಎಸ್. ಆನಂದ ಅವರ ಎಸ್ಟೇಟ್‌ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 2 ಹಸುಗಳು, ಭದ್ರಗೋಳ ನಿವಾಸಿ ಪಿ.ಪಿ.ಮುತ್ತಣ್ಣ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ 1 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.
ವಿರಾಜಪೇಟೆ ಡಿವೈಎಸ್‌ಪಿ ಎಸ್.ಮಹೇಶ್ ಕುಮಾರ್, ಗೋಣಿಕೊಪ್ಪಲಿ ಸಿಪಿಐ ಶಿವರಾಜ ಆರ್.ಮುಧೋಳ್, ಪಿಎಸ್‌ಐ ಬಿ.ಕೆ. ಪ್ರದೀಪ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಕೇರಳ ರಾಜ್ಯ ಮತ್ತು ಕಾನೂರು ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.