ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಪ್ರಕರಣದಲ್ಲಿ ಕಾಕತಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನಗರದ ಶಿವಾಜಿ ವಂಟಮೂರಿ, ವಿಶಾಲ್ಮಾಸ್ತಿ, ಭೀಮರಾಯ ಕರಿಕಟ್ಟಿ, ಮಾರುತಿ ಹಂಚಿನಮನಿ ಬಂಧಿತರು. ಹುಕ್ಕೇರಿ ತಾಲೂಕಿನಿಂದ ಬೆಳಗಾವಿ ನಗರಕ್ಕೆ ಬರುತ್ತಿರುವ ಸಂದರ್ಭದಲ್ಲಿ ವಂಟಮೂರಿಯಲ್ಲಿ ಕೆಲ ಯುವಕರು ಬೈಕ್ ಮೇಲೆ ಬಂದು ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಲಾರಿ ಚಾಲಕ ಭೀರಪ್ಪ ಸಂಕೇಶ್ವರ ನೀಡಿದ ದೂರಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಿ, ಮೊಬೈಲ್, ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.