ಧಾರವಾಡ: ವಿಳಾಸ ವಿಚಾರಿಸುವ ನೆಪವೊಡ್ಡಿ ಬೈಕ್ ನಿಲ್ಲಿಸಿ ಸವಾರನ ಬಳಿ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಽಸಿದ್ದಾರೆ.
ಮೇ 21ರ ರಾತ್ರಿ 9.30ರ ಸುಮಾರಿಗೆ ಅಳ್ನಾವರ ರಸ್ತೆಯ ಮಂಡಿಹಾಳ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ನಾಲ್ವರು ತಡೆದಿದ್ದರು. ಚಾಕು ತೋರಿಸಿ ಅವನ ಬಳಿ ಇದ್ದ ಮೊಬೈಲ್, 5,000 ರೂಪಾಯಿ ಇದ್ದ ಪರ್ಸ್ ದೋಚಿಕೊಂಡು ಹೋಗಿದ್ದರು. ಸ್ಥಳೀಯರು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಹಿಳಾ ಪಿಎಸ್‌ಐ ರೇಣುಕಾ ಐರಾಣಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಂಬಾಲಿಸಿ ಬಂಽಸುವಲ್ಲಿ ಯಶಸ್ವಿಯÁಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು, ಕಳವಾಗಿದ್ದ ಮೊಬೈಲ್ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
ಪಿಎಸ್‌ಐ ರೇಣುಕಾ ಐರಾಣಿ ಅವರೊಂದಿಗೆ ಬಸನಗೌಡ ಪಾಟೀಲ, ಕುಮಾರ ಕಾಂಬಳೆ, ಎಂ.ಜಿ. ಸಯ್ಯದನವರ, ಮಾರುತಿ ಕುಂಬಾರ, ಕೃಷ್ಣಾ ವಿಭೂತಿ, ಚಿದಾನಂದ ಅಬ್ಬಿಗೇರಿ, ಮಹಾಂತೇಶ ನೆಟಗಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ದರೋಡೆ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಡಾ. ಗೋಪಾಲ ಬ್ಯಾಕೋಡ ವಿಶೇಷ ಬಹುಮÁನ ಘೋಷಿಸಿದ್ದಾರೆ.