ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನದಲ್ಲಿ ಮದುವೆಗೆ ದ್ವಿಚಕ್ರ ವಾಹನ ತೆರಳುತ್ತಿದ್ದ ಸಂದರ್ಭದಲ್ಲಿ ಖಾಸಗಿ ಶಾಲೆಯ ಬಸ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಹೃದಯ ವಿದ್ರಾವಕ ಈ ದುರ್ಘಟನೆಯು ಚಿಂತಾಮಣಿ ತಾಲೂಕಿನ ಅನುಪಲ್ಲಿ ಬುರುಡುಗಂಟೆಯಲ್ಲಿ ನಡೆದಿದೆ. ಇದರಲ್ಲಿ ಅದೃಷ್ಟವಶಾತ್ ಒಂದು ಮಗು ಬಚಾವ್ ಆಗಿದ್ದು ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶಿಡ್ಲಘಟ್ಟ ತಾಲೂಕಿನ ಚಿಲಕಲನೇರ್ಪು ಗ್ರಾಮದ ಬಾಲಾಜಿ (೩೦ ವರ್ಷ). ಇವರ ಮಾವ ಕೋಲಾರದ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ಳ ಗ್ರಾಮದ ಟಿ.ಎನ್.ವೆಂಕಟೇಶಪ್ಪ (೫೫ ವರ್ಷ), ಬಾಲಾಜಿಯ ಮಕ್ಕಳಾದ ಹರೀಶ್ (೧೧ ವರ್ಷ) ಮತ್ತು ಆರ್ಯ (೮ ವರ್ಷ) ಮೃತರು. ಶಿವಾನಿ (೬ ವರ್ಷ) ಬಚಾವ್ ಆಗಿದ್ದಾಳೆ
ಚಿಲಕಲನೇರ್ಪು ಗ್ರಾಮದಿಂದ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟಕ್ಕೆ ಬಾಲಾಜಿ ಕುಟುಂಬಸ್ಥರು ಬೈಕ್‌ನಲ್ಲಿ ಮದುವೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಅತಿ ವೇಗವಾಗಿ ಬಂದ ಎಸ್ ಎಲ್ ಇ ಶಿಕ್ಷಣ ಸಂಸ್ಥೆಯ ವಾಹನವು ಬೈಕಿಗೆ ಡಿಕ್ಕಿ ಹೊಡೆದಿದೆ. ಇದರ ಡಿಕ್ಕಿಯ ರಭಸಕ್ಕೆ ಪಲ್ಸರ್ ದ್ವಿಚಕ್ರ ವಾಹನ ಎರಡು ಭಾಗಗಳಾಗಿ ರಸ್ತೆಯಲ್ಲಿ ಬಿದ್ದಿದ್ದು ಅಪಘಾತ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಚಿಂತಾಮಣಿ ತಾಲೂಕಿನ ಕೆಂಚಾರ‍್ಲಹಳ್ಳಿ ಠಾಣೆಯ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು. ಇನ್ನೂ ಮೃತರ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿತ್ತು.