ಜಿಲ್ಲೆ

ಹೆದ್ದಾರಿಯಲ್ಲಿ ನಾಲ್ವರು ದುರ್ಮರಣ

ಕೋಲಾರ ಡೆಸ್ಕ್

ವಿಜಯವಾಣಿ ಸುದ್ದಿಜಾಲ ಬಂಗಾರಪೇಟೆ

ತಾಲೂಕಿನ ಕುಪ್ಪನಹಳ್ಳಿ ಸಮೀಪ ಬೆಂಗಳೂರು&ಚೆನ್ನೆ ಕಾರಿಡಾರ್​ನಲ್ಲಿ ಭಾನುವಾರ ರಾತ್ರಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಕೆಜಿಎಫ್​ ತಾಲೂಕಿನ ಕಮ್ಮಸಂದ್ರದ ಮಹೇಶ (45), ಇವರ ಪುತ್ರಿ ವಿದ್ವಿತಾ (2), ತಾಯಿ ರತ್ನಮ್ಮ (60) ಹಾಗೂ ದ್ವಿಚಕ್ರ ವಾಹನ ಸವಾರ ದೊಡ್ಡೂರು ಗ್ರಾಮದ ಶ್ರೀನಿವಾಸ್​ (30) ಮೃತರು.

ಚೆನ್ನೆ&ಬೆಂಗಳೂರು ಎಕ್ಸ್​ ಪ್ರೆಸ್​ ಕಾರಿಡಾರ್​ನಲ್ಲಿ ಕಮ್ಮಸಂದ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿಗೆ ಕುಪ್ಪನಹಳ್ಳಿ ಸಮೀಪ ಎದುರುಗಡೆಯಿಂದ ಬಂದ ಬೈಕ್​ ನಡುವೆ ಅಪಘಾತ ಸಂಭವಿಸಿದೆ. ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್​ಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರು ಚಾಲಕ ಪ್ರಯತ್ನಿಸಿದರೂ ನಿಯಂತ್ರಣ ಕಳೆದುಕೊಂಡು ಬೈಕ್​ಗೆ ಗುದ್ದಿ ನಂತರ ಪಕ್ಕದ ಕಂದಕಕ್ಕೆ ಉರುಳಿದೆ. ಈ ವೇಳೆ ಬೈಕ್​ ಸವಾರ ಮತ್ತು ಕಾರಿನಲ್ಲಿದ್ದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಂತೋಷ ಅವರ ಪತ್ನಿ, 8 ತಿಂಗಳ ಗರ್ಭಿಣಿ ಸುಶ್ಮಿತಾ, ಮಗ ವಿರಾಟ್​, ಅತ್ತೆ ಸುಜಾತಾ ಮತ್ತು ಕಾರಿನ ಚಾಲಕ ಸುನೀಲ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಮೃತದೇಹಗಳನ್ನು ಸೋಮವಾರ ಗ್ರಾಮಕ್ಕೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದನ್ನು ಕಂಡ ಗ್ರಾಮಸ್ಥರ ಕಣ್ಣಾಲಿ ಒದ್ದೆಯಾದವು.

ಲೋಕಾರ್ಪಣೆಗೂ ಮುನ್ನ ಸಾವಿನ ರಹದಾರಿ?

ಬೆಂಗಳೂರು&ಚೆನ್ನೆ ಕಾರಿಡಾರ್​ ಲೋಕಾರ್ಪಣೆಗೂ ಮುನ್ನವೇ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ಸಾವು&ನೋವಿಗೆ ಕಾರಣ ಎಂಬ ಮಾತು ಕೇಳಿ ಬರುತ್ತಿವೆ.

ಅವೈಜ್ಞಾನಿಕವಾಗಿ ನಿರ್ಮಾಣ

ರಸ್ತೆ ಮಾರ್ಗದಲ್ಲಿ ಅಪಘಾತ ನಡೆದಾಗ ಆಂಬುಲೆನ್ಸ್​ ಹಾಗೂ ಪೊಲೀಸರು ಟನಾ ಸ್ಥಳಕ್ಕೆ ಹೋಗಲು ಒಂದು ಮಾರ್ಗದಲ್ಲಿ ಹೊಸಕೋಟೆ ಬಳಿ ಮತ್ತೊಂದು ಮಾರ್ಗ ಬೆಮೆಲ್​ ನಗರದ ಬಳಿ ಅವಕಾಶ ಕಲ್ಪಿಸಿದ್ದು, ಇದರ ಮದ್ಯೆ ಎಲ್ಲಿಯೂ ಸಹ ಹತ್ತಿರದಲ್ಲಿ ಹೆದ್ದಾರಿ ಪ್ರವೇಶ ಮಾಡಲು ಅನುಕೂಲ ಕಲ್ಪಿಸಿಲ್ಲ. ಅವೈಾನಿಕ ಹೆದ್ದಾರಿ ನಿರ್ಮಾಣದಿಂದ ಸಾವು ನೋವು ಸಂಭವಿಸಿದಾಗ ತುರ್ತು ವೇಳೆ ಜೀವ ಉಳಿಸುವುದು ದುಸ್ತರ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.