ಶಿವಮೊಗ್ಗ: ನಗರದ ಹೊರವಲಯದ ಅಬ್ಬಲಗೆರೆ ಸಮೀಪ ಐಪಿಎಲ್(ಇಂಡಿಯಾ ಪಿಸ್ಟನ್ಸ್ ಲಿಮಿಟೆಡ್) ಫ್ಯಾಕ್ಟರಿಯಲ್ಲಿ ಸೋಮವಾರ ಬೆಳಗ್ಗೆ ಐರನ್ ಕಾಸ್ಟಿಂಗ್ ಮಾಡುವಾಗ ಯಂತ್ರ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಶ್ರೀನಿವಾಸ್, ಷಣ್ಮುಖಪ್ಪ, ಶಿವಲಿಂಗಪ್ಪ ಮತ್ತು ಗಂಗಾಧರಪ್ಪ ಗಾಯಗೊಂಡ ಕಾರ್ಮಿಕರು. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದೆ.
ಸೋಮವಾರ ಬೆಳಗ್ಗೆ ಮೊದಲ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಕಬ್ಬಿಣವು ಲಿಕ್ವಿಡ್ ಸ್ಟೇಟಸ್‌ನಲ್ಲಿದ್ದ ವೇಳೆ ಸಿಡಿದಿದೆ ಎನ್ನಲಾಗಿದೆ. ಐರನ್ ಕಾಸ್ಟಿಂಗ್ ಮಾಡುವ ಕಂಪನಿ ಇದಾಗಿದ್ದು, 1,300 ಡಿಗ್ರಿ ಫ್ಯಾರನ್ ಹೈಟ್ ಉಷ್ಣಾಂಶದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಯಂತ್ರ ಕೈಕೊಟ್ಟು ಈ ಅವಘಡ ಸಂಭವಿಸಿದೆ ಎಂದು ಕಂಪನಿಯ ಎಚ್.ಆರ್.ಸುರೇಶ್ ತಿಳಿಸಿದ್ದಾರೆ.
ಹೊಳಲೂರು, ಸೋಗಿಲು, ಸುರುಹೊನ್ನೆ ಮತ್ತು ಶಿವಮೊಗ್ಗದಿಂದ ತೆರಳಿದ್ದ ಕಾರ್ಮಿಕರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಆನಂತರ ಮಣಿಪಾಲ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.