ಚಿಕ್ಕೋಡಿ ತಾಲೂಕಿನ ಗ್ರಾಮೀಣ ಗ್ರಂಥಾಲಯಗಳಿಗೆ ತಾಪಂ ಇಒ ಎಸ್.ಎಸ್.ಕಾದ್ರೊಳ್ಳಿ ಕಂಪ್ಯೂಟರ್ ವಿತರಿಸಿದರು. ಚಿದಾನಂದ ಮಡ್ಡೆ, ಶಿವರಾಯ ಬಿರಾದರ, ಸಲೀಂ ನದ್ಾ, ಶೋಭಾ ಬಡಿಗೇರ ಇದ್ದರು. 
ಜಿಲ್ಲೆ

ನಾಲ್ಕು ಗ್ರಂಥಾಲಯಗಳಿಗೆ ಕಂಪ್ಯೂಟರ್ ವಿತರಣೆ

ಪ್ರಶಾಂತ ಹೂಗಾರ

ಚಿಕ್ಕೋಡಿ: ತಾಲೂಕಿನ 4 ಗ್ರಾಪಂ ಗ್ರಂಥಾಲಯಗಳಿಗೆ ಗ್ರಾಮ ಡಿಜಿ ವಿಕಸನದ ಕಾರ್ಯಕ್ರಮದ ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆ ವತಿಯಿಂದ ನೀಡಲಾದ ಡಿಜಿಟಲ್ ಸಾಧನೆಗಳನ್ನು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಾದ್ರೊಳ್ಳಿ ವಿತರಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಪಂ ಗ್ರಂಥಾಲಯಗಳಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಜಿಲ್ಲೆಯ 125 ಗ್ರಾಪಂ ಗ್ರಂಥಾಲಯಗಳಿಗೆ ಗಣಕಯಂತ್ರಗಳು ಹಾಗೂ ಮೊಬೈಲ್‌ಗಳು ವಿತರಿಸಿದ್ದು, ಈ ವರ್ಷ ಜಿಲ್ಲೆಯ 51 ಗ್ರಂಥಾಲಯಗಳಿಗೆ ಗಣಕಯಂತ್ರಗಳು ಹಾಗೂ ಮೊಬೈಲ್‌ಗಳನ್ನು ವಿತರಿಸಲಾಗುತ್ತಿದೆ.

ಈ ವರ್ಷ ಚಿಕ್ಕೋಡಿ ತಾಲೂಕಿನ ಮುಗಳಿ, ಜೈನಾಪುರ, ವಡ್ರಾಳ, ನಾಯಿಂಗ್ಲಜ್ ಗ್ರಂಥಾಲಯಗಳಿಗೆ ವಿತರಿಸಿದರು. ಶಿಕ್ಷಣ ಫೌಂಡೇಷನ್ ಗ್ರಾಮ ಡಿಜಿ ವಿಕಸನ ಜಿಲ್ಲಾ ಸಂಯೋಜಕ ಚಿದಾನಂದ ಮಡ್ಡೆ ,ಪಿಡಿಒ ಶಿವರಾಯ ಬಿರಾದರ, ಸಲೀಂ ನದ್ಾ, ಶೋಭಾ ಬಡಿಗೇರ, ರೇಖಾ ಅಶೋದೆ, ಮಹಾಲಿಂಗ ತಳವಾರ, ಸುರೇಶ ಬಡಿಗೇರ ಇದ್ದರು.