ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಾಖಲಾದ ಎಂಡಿಎಂಎ ಮಾರಾಟ ಮಾಡಿದ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹಲಸೂರು ನಿವಾಸಿ ಮೊಹಮ್ಮದ್ ನದೀಂ (27), ಉಚ್ಚಿಲ ಸೋಮೇಶ್ವರ ನಿವಾಸಿ ಉಮರುಲ್ ಾರೂಕ್ (30), ಕೆ.ಸಿ. ರೋಡ್ ಕಿನ್ಯಾ ನಿವಾಸಿ ಇಮ್ತಿಯಾಜ್ ಇಸ್ಮಾಯಿಲ್ (41), ಕುಂಪಲ ಸುಭಾಷ್ ನಗರ ನಿವಾಸಿ ಧನುಷ್ (29) ಬಂಧಿತ ಆರೋಪಿಗಳು.
ಪ್ರಕರಣ ವಿವರ: ಬೆಂದೂರುನಲ್ಲಿರುವ ಲಾಡ್ಜ್‌ನಲ್ಲಿ ಆರೋಪಿಗಳಾದ ಮೊಹಮ್ಮದ್ ನದೀಂ, ಉಮರುಲ್ ಾರೂಕ್, ಇಮ್ತಿಯಾಜ್ ಇಸ್ಮಾಯಿಲ್ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದ್ದಾರೆ. ಈ ಸಂದರ್ಭ ಸುಮಾರು 35.53ಗ್ರಾಂ ಎಂಡಿಎಂಎಯನ್ನು, 7030ರೂ. ನಗದು ಸೇರಿದಂತೆ ಇತರ ವಸ್ತುಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣ 2: ನಗರದ ಬೋಳಾರ ಮುಳಿಹಿತ್ಲು ಬಳಿಯಲ್ಲಿ ಆರೋಪಿ ಧನುಷ್ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಈ ಬಗ್ಗೆ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ 2.32ಗ್ರಾಂ ಎಂಡಿಎಂಎ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.