ಮಂಗಳೂರು: ಮನೆಯ ಬಳಿ ಶೆಡ್ ನಿರ್ಮಿಸಿ ಅಕ್ರಮವಾಗಿ ಜಾನುವಾರು ಮಾಂಸವನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ನಾಲ್ವರನ್ನು ಗ್ರಾಮಾಂತರ ಠಾಣೆ ಪೊಲೀಸರು ಉಳಾಯಿಬೆಟ್ಟು ಎಂಬಲ್ಲಿ ಬಂಧಿಸಿದ್ದಾರೆ. ಉಳಾಯಿಬೆಟ್ಟು ಬೋರುಗುಡ್ಡೆ ಹೌಸ್ ನಿವಾಸಿಗಳಾದ ದಾವೂದ್ ಸಿದಿಕ್ (45), ಮಹಮ್ಮದ್ ಶರ್ೀ (43), ಉಳಾಯಿಬೆಟ್ಟು ಸಂಕಮಾರ್ ನಿವಾಸಿಗಳಾದ ಮೊಹಮ್ಮದ್ ಇಸಾಕ್ (53), ಮಹಮ್ಮದ್ ಜಲಾಲುದ್ದೀನ್ (26) ಬಂಧಿತ ಆರೋಪಿಗಳು. ಆರೋಪಿಗಳು ಮಾರಾಟಕ್ಕೆ ಸಿದ್ಧ ಮಾಡಿಟ್ಟಿದ್ದ 42 ಸಾವಿರ ರೂ. ಮೌಲ್ಯದ 161.28 ಕೆ.ಜಿ. ಜಾನುವಾರು ಮಾಂಸ ಮತ್ತು ಕೃತ್ಯಕ್ಕೆ ಬಳಿಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಗವಿರಾಜ್ ಆರ್.ಪಿ ಶುಕ್ರವಾರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.