ಕುದೂರು: ಸೋಲೂರು ಹೋಬಳಿಯ ಕನಕೇನಹಳ್ಳಿಯ ಜಮೀನಿನಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಕುದೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಗ್ರಾಮದ ಮಹದೇವಯ್ಯ, ಚಾಂದ್ ಪಾಷಾ, ಶಿವಕುಮಾರ್, ಆರ್ೀ ಉಲ್ಲಾ ಖಾನ್ ಬಂಧಿತರು.
ಜೂಜು ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುದೂರು ಪೊಲೀಸರು ದಾಳಿ ನಡೆಸಿ, ಈ ನಾಲ್ವರನ್ನು ಬಂಧಿಸಿ, 4 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.