ಜಿಲ್ಲೆ

ಗಾಂಜಾ ಸೇವಿಸಿದ್ದ ನಾಲ್ವರ ಆರೋಪಿಗಳ ಬಂಧನ

Haveri - Kariyappa Aralikatti

ರಾಣೆಬೆನ್ನೂರ: ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿಯ ಶಹರ ಠಾಣೆ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಗೌರಿಶಂಕರ ನಗರದ ಶೇಖಿಲ್​ ಮಸ್ಸೂರ ಕಿತ್ತೂರ (23), ಕಿರಣ ಗೋಪಾಲಪ್ಪ ಚವ್ಹಾಣ (27), ವಿದ್ಯಾನಗರದ ಹರೀಶ ನೇತಾಜಪ್ಪ ಮಾಳಗಿ (27), ದೇವೇಂದ್ರ ದಿನಾನಾಥ ಚೌದ್ರಿ (24) ಬಂಧಿತ ಆರೋಪಿಗಳು.

ಇವರು ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದು ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಬಂಧಿಸಿದೆ. ನಂತರ ವೈದ್ಯಕಿಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.