ಜಿಲ್ಲೆ

ವಿಬುಧೇಶ ಶ್ರೀಗಳ ದೂರದೃಷ್ಟಿತ್ವ ಅಗಾಧ...

ಪ್ರೊ. ಕೆ.ಸದಾಶಿವ ರಾವ್​ ಶ್ಲಾಘನೆ

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರಮಪೂಜ್ಯ ವಿಬುಧೇಶ ತೀರ್ಥ ಶ್ರೀಪಾದರಿಗೆ ವಿಜ್ಞಾನ ಮತ್ತು ಇಂಗ್ಲಿಷ್​ ಮೇಲೆ ಪ್ರೀತಿ ಇತ್ತು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರೂ ಇಂಗ್ಲಿಷ್​ ಭಾಷೆಯ ತಿಳಿವಳಿಕೆ ಅವರ ಅವಶ್ಯಕತೆ ಆಗಿತ್ತು. ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಶ್ರೀಗಳ ದೂರದೃಷ್ಟಿತ್ವ, ಕರ್ತೃತ್ವ ಶಕ್ತಿ ಅಗಾಧವಾಗಿತ್ತು ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಸದಾಶಿವ ರಾವ್​ ಶ್ಲಾಘಿಸಿದರು.

ಉಡುಪಿ ಪೂರ್ಣಪ್ರಜ್ಞ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿ, ಮೆರಿಟ್​ ಆಧಾರದಲ್ಲಿ ಅಧ್ಯಾಪಕರನ್ನು ನೇಮಿಸುತ್ತಿರುವುದರಿಂದ ಸಂಸ್ಥೆ ಬೆಳೆದಿದೆ. ಶ್ರೀಗಳು ಜಾತಿ-ಮತ, ಧರ್ಮದ ಸಂಕುಚಿತ ದೃಷ್ಟಿ ಇಲ್ಲದ ಪರಮ ಯೋಗಿ ಆಗಿದ್ದರು ಎಂದರು.

ವಿದ್ಯಾರ್ಥಿಗಳಿಗೆ ತಾಳ್ಮೆ ಅಗತ್ಯ

ಬೆಂಗಳೂರಿನ ಸೆಲ್ಫಿಪೇಜ್​ ಡೆವಲಪರ್ಸ್​ ಪೆ.ಲಿ.ನ ವ್ಯವಸ್ಥಾಪಕ ನಿರ್ದೇಶಕ, ಸಂಸ್ಥೆಯ ಹಳೆಯ ವಿದ್ಯಾರ್ಥಿ ನಂಜೇಶ ಬೆನ್ನೂರು ಮಾತನಾಡಿ, ನಮ್ಮ ಜೀವನ ರೂಪಿಸಿಕೊಳ್ಳಲು ಪೂರಕವಾಗಿ ಎಐ (ಕೃತಕ ಬುದ್ಧಿಮತ್ತೆ) ಬಳಕೆಯಾಗಬೇಕು. ಶ್ರಮಕ್ಕೆ ತಕ್ಕ ಫಲ ಲಭಿಸುತ್ತದೆ. ಬೆಳಗ್ಗೆ ನೆಟ್ಟ ಗಿಡ ಸಂಜೆಯೇ ಫಲ ನೀಡದು. ವಿದ್ಯಾರ್ಥಿಗಳಿಗೆ ತಾಳ್ಮೆ ಅಗತ್ಯ. ಜೀವನದ ಗುರಿ ಏನು ಎಂಬುದನ್ನು ಚಿಂತಿಸಿ, ಅದಕ್ಕಾಗಿ ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಶ್ರೀಗಳ ಆಶಯದಂತೆ ಆಂಗ್ಲ ಭಾಷೆ ಕಲಿತಿದ್ದರಿಂದ ರಾಷ್ಟ್ರೀಯ, ಜಾಗತಿಕ ಮಟ್ಟದಲ್ಲಿ ನನ್ನ ಸಂಸ್ಥೆ ಬೆಳೆಸಲು

ಸಾಧ್ಯವಾಯಿತು ಎಂದರು.

ಉಡುಪಿ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಎ.ಪಿ. ಭಟ್​ ಅಧ್ಯಕ್ಷತೆ ವಹಿಸಿದ್ದರು.

ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಪಿ.ಎಸ್​. ಐತಾಳ, ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ ಹೊಳ್ಳ, ಕಾಲೇಜಿನ ಪ್ರಾಚಾರ್ಯ ಡಾ.ಚಂದ್ರಕಾಂತ ಭಟ್​, ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಡಾ.ರಾಮು ಎಲ್​. ಉಪಸ್ಥಿತರಿದ್ದರು.

ಪ.ಪೂ. ಕಾಲೇಜಿನ ಪ್ರಾಚಾರ್ಯ ಸಂತೋಷಕುಮಾರ್​ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮಾನಂದ ರಾವ್​ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಶ್ರೀದೇವಿ ಬಾಳಿಗಾ ವಂದಿಸಿದರು.

ಶ್ರೀಪಾದರಿಗೆ ವಿಜ್ಞಾನದ ವಿಶೇಷ ಆಸಕ್ತಿ ಇದ್ದುದರಿಂದ ಪ್ರತಿಭಾ ಪಲಾಯನ ಆಗಬಾರದೆಂದು ಪೂರ್ಣಪ್ರಜ್ಞ ಸೈಂಟಿಫಿಕ್​ ರೀಸರ್ಚ್​ ಸೆಂಟರ್​ ಸ್ಥಾಪಿಸಿದರು. ದೇಶದ ಅನೇಕ ವಿಜ್ಞಾನಿಗಳ ಸಂಪರ್ಕವೂ ಅವರಿಗಿತ್ತು. ಶ್ರೇಷ್ಠ ವಿಜ್ಞಾನಿಗಳನ್ನು ಉಡುಪಿಗೆ ಕರೆಯಿಸಿ ಕಾರ್ಯಕ್ರಮ ಮಾಡಿರುವುದು ವಿಜ್ಞಾನ ಹಾಗೂ ವಿಜ್ಞಾನಿಗಳ ಬಗ್ಗೆ ಅವರಿಗಿದ್ದ ಒಲವು ಅರ್ಥವಾಗುತ್ತದೆ. | ಡಾ. ಎ.ಪಿ. ಭಟ್​. ಪಿಪಿಸಿ ಗೌರವ ಪ್ರಧಾನ ಕಾರ್ಯದರ್ಶಿ