ಸಿಎಂಎ್ಆರ್‌ಐ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವೈವಿದ್ಯಮಯ ಸಂಶೋಧನೆಯ ವಿಶೇಷ ಪ್ರದರ್ಶನದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. 
ಜಿಲ್ಲೆ

ಸಿಎಂಎ್ಆರ್‌ಐ ಪ್ರಾದೇಶಿಕ ಕಚೇರಿಯಲ್ಲಿ ಸಂಸ್ಥಾಪಕರ ದಿನಾಚರಣೆ

ಮಂಗಳೂರು: ಇಂಡಿಯನ್ ಕೌನ್ಸಿಲ್ ಆ್ ಅಗ್ರಿಕಲ್ಚರ್(ಐಸಿಎಆರ್) ಅಧೀನದಲ್ಲಿರುವ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎ್ಆರ್‌ಐ) ಹೊಗೆಬಜಾರ್ ಪ್ರಾದೇಶಿಕ ಕಚೇರಿಯಲ್ಲಿ 75ನೇ ಸಂಸ್ಥಾಪಕರ ದಿನಾಚರಣೆಯನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಬೆಳಗ್ಗೆ 10ರಿಂದ ಸಂಜೆ 4.30ರ ವರೆಗೆ ವೈವಿದ್ಯಮಯ ಸಂಶೋಧನೆಯ ವಿಶೇಷ ಪ್ರದರ್ಶನದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮುದ್ರದಲ್ಲಿನ ಏರಿಳಿತ, ಮೀನುಗಳ ಪ್ರಬೇಧ, ಮೀನುಗಾರಿಕೆಯ ವಿಧಾನ ಸೇರಿದಂತೆ ವಿವಿಧ ವಿಚಾರಗಳ ಪ್ರಾತ್ಯಕ್ಷಿಕೆ ನಡೆಯಿತು.

ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುತ್ತಿರುವುದು ಕಂಡುಬಂತು.

ಇಂಡಿಯನ್ ಕೌನ್ಸಿಲ್ ಆ್ ಅಗ್ರಿಕಲ್ಚರ್ ಮಂಗಳೂರು ರೀಜನಲ್ ಸೆಂಟರ್ ಆ್ ಸಿಎಂಎ್ಆರ್‌ಐ ನ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ. ಸುಜಿತಾ ಥೋಮಸ್, ಪ್ರಿನ್ಸಿಪಾಲ್ ಸೈಂಟಿಸ್ಟ್‌ಗಳಾದ ಡಾ. ಕೆ.ಎಂ. ರಾಜೇಶ್, ಡಾ. ಬಿಂದು ಸುಲೋಚನ, ಡಾ. ದಿವ್ಯಾ ವಿಶ್ವಾಂಬರ್, ಡಾ. ಸುನೀಲ್, ಡಾ. ವೀಣಾ, ನಟರಾಜ್ ಉಪಸ್ಥಿತರಿದ್ದರು.