ಆನೇಕಲ್​ ತಾಲೂಕಿನ ಸರ್ಜಾಪುರ ಠಾಣೆ ಕಟ್ಟಡ ನಿಮಾರ್ಣಕ್ಕೆ ರಾಜ್ಯ ಪೊಲೀಸ್​ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ ಶಂಕುಸ್ಥಾಪನೆ ನೆರವೇರಿಸಿದರು. ಡಿಜಿಪಿ ಡಾ.ಅರುಣ್​ ಚಕ್ರವರ್ತಿ, ಕೇಂದ್ರವಲಯದ ಪೊಲೀಸ್​ ಮಹಾ ನಿರೀಕ್ಷಕ ಲಾಬೂರಾಮ್​, ಗ್ರಾಮಾಂತರ ಜಿಲ್ಲೆ ಪೊಲೀಸ್​ ಅಧಿಕ್ಷಕ ಸಿ.ಕೆ.ಬಾಬಾ, ಪ್ರಿಸ್ಟೇಜ್​ ಸಂಸ್ಥೆಯ ಮುಖ್ಯಸ್ಥ ವಿಜಯ್​ ಶ್ರೀವತ್ಸವ್​ ಇದ್ದರು. 
ಜಿಲ್ಲೆ

ಸರ್ಜಾಪುರ ಠಾಣೆ ಕಟ್ಟಡಕ್ಕೆ ಶಂಕುಸ್ಥಾಪನೆ

ಸರ್ಜಾಪುರ : ಆನೇಕಲ್​ ತಾಲೂಕಿನ ಸರ್ಜಾಪುರದಲ್ಲಿ ಪ್ರೆಸ್ಟೀಜ್​ ಸಂಸ್ಥೆಯ ಸಿಎಸ್​ಆರ್​ ಅನುದಾನ 4.50 ಕೋಟಿ ರೂಪಾಯಿ ವೆಚ್ಚದಲ್ಲಿ ಪೊಲೀಸ್​ ಠಾಣೆ ನಿಮಾರ್ಣಕ್ಕೆ ರಾಜ್ಯ ಪೊಲೀಸ್​ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಜಾಗತಿಕ ಮಟ್ಟದಲ್ಲಿ ಬೆಳೆದಿರುವ ಸರ್ಜಾಪುರಕ್ಕೆ ಸೂಕ್ತ ಕಟ್ಟಡ ನಿರ್ಮಿಸಿಕೊಡಿ ಎಂದು ಇಲಾಖೆಯು ಕಂಪನಿಗೆ ಮನವಿ ಮಾಡಿದ್ದು, ಸಂಸ್ಥೆಯವರು ಆಧುನಿಕ ರೀತಿಯಲ್ಲಿ ನಿರ್ಮಿಸಲು ಒಪ್ಪಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿಮಾರ್ಣವಾಗುತ್ತಿರುವ ಕಟ್ಟಡಕ್ಕೆ ಶಾಸಕರೂ ಸರ್ಕಾರದಿಂದ ಆಗಬೇಕಾದ ಕೆಲಸ ಕಾರ್ಯ ಮಾಡಿ ಈ ಭಾಗದಲ್ಲಿ ಸುಸಜ್ಜಿತ ಪೊಲೀಸ್​ ಠಾಣೆ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಡಾ.ಎಂ.ಎ.ಸಲೀಂ ಹೇಳಿದರು.

ಸರ್ಜಾಪುರ ಠಾಣೆಯಲ್ಲಿ ಎರಡು ವರ್ಷಗಳಿಂದ ಆರಕ್ಷಕ ವೃತ್ತ ನಿರೀಕ್ಷಕರಾಗಿರುವ ಪಿ.ಜಿ.ನವೀನ್​ ಕುಮಾರ್​ ಠಾಣೆ ನಿರ್ಮಾಣಕ್ಕೆ ಅಪಾರವಾಗಿ ಶ್ರಮಿಸಿದ್ದು, ಅವರ ಶ್ರಮಕ್ಕೆ ಲ ಸಿಗುತ್ತಿದೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆನೇಕಲ್​ ಉಪ ವಿಭಾಗದ ಪೊಲೀಸ್​ ಡಿವೈಎಸ್​ಪಿ ಮೋಹನ್​ ಕುಮಾರ್​, ನಟರಾಜ್​, ಲಕ್ಷ$್ಮಣ್​ ಸಿಂಗ್​, ಸರ್ಜಾಪುರ ಗ್ರಾಪಂ ಅಧ್ಯಕ್ಷೆ ಎನ್​.ವೀಣಾ, ಉಪಾಧ್ಯಕ್ಷ ಡಾ.ಎಸ್​.ಮಂಜುನಾಥ್​ ಸರ್ಜಾ, ಮಾಜಿ ಅಧ್ಯಕ್ಷ ವೈ.ಶ್ರೀರಾಮುಲು, ಎಸ್​.ಎಂ.ಶ್ರೀನಿವಾಸ್​, ಎಸ್​.ವಿ.ಶ್ರೀನಿವಾಸ್​ ಬುಡಗಪ್ಪ, ಡಾ.ಎನ್​.ಕಲಾವತಿ ಮೂರ್ತಿ ಕುಮಾರ್​ ಇದ್ದರು.

ಶೀಘ್ರ ಕಾಮಗಾರಿ ಪ್ರಾರಂಭ ಳ ಆನೇಕಲ್​ ತಾಲೂಕಿನಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತಿದ್ದು, ಸರ್ಜಾಪುರ, ದೊಮ್ಮಸಂದ್ರ, ಚಂದಾಪುರ, ಅತ್ತಿಬೆಲೆ ಮತ್ತು ಆನೇಕಲ್​ ಭಾಗದಲ್ಲಿ ಸಂಚಾರ ಸಿಕ್ಕು ಹೆಚ್ಚಾಗಿದೆ. ಈ ಭಾಗಗಳಲ್ಲಿ ಟ್ರಾಫಿಕ್​ ಠಾಣೆ ನಿರ್ಮಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದ್ದು, ಅದರಂತೆ ತಾಲೂಕಿನಲ್ಲಿ ಮಹಿಳಾ ಪೊಲೀಸ್​ ಠಾಣೆಯೂ ಆಗಬೇಕಾಗಿದೆ. ಶ್ರೀ ಕಾಮಗಾರಿ ಪ್ರಾರಂಭಿಸಿ ವರ್ಷದೊಳಗೆ ಗುಣಮಟ್ಟದ ಠಾಣೆ ನಿರ್ಮಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ಭರವಸೆ ನೀಡಿದರು.