ಜಿಲ್ಲೆ

ದೇವಿಯ ಅನುಗ್ರಹದಿಂದ ಊರು ಅಭಿವೃದ್ಧಿ : ಮಾಣಿಲ ಸ್ವಾಮೀಜಿ ಆಶೀರ್ವಚನ

ಕಡಬ: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಭಕ್ತರು ಕೈಜೋಡಿಸಿ ಪರಿಪೂರ್ಣಗೊಳಿಸಬೇಕು. ಬ್ರಹ್ಮಕಲಶ ಆದ ಶ್ರೀ ದೇವಿಯ ಅನುಗ್ರಹದಿಂದ ಊರು ಅಭಿವೃದ್ಧಿಗೊಳ್ಳುತ್ತದೆ ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು.

ಜೀರ್ಣೋದ್ಧಾರಗೊಳ್ಳುತ್ತಿರುವ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೋಮವಾರ ರಾಜಗೋಪುರ ಮತ್ತು ರಥಭೀದಿಯಲ್ಲಿ ಮಹಾದ್ವಾರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಉದ್ಯಮಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರಾಜಗೋಪುರ ಶಿಲಾನ್ಯಾಸ ನೆರವೇರಿಸಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಶುಭಹಾರೈಸಿದರು. ಡಾಕ್ಟರೇಟ್ ಪದವಿ ಪಡೆದ ಡಾ.ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರನ್ನು ಸನ್ಮಾನಿಸಲಾಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮೊದಲಾದವರಿದ್ದರು. ಕ್ಷೇತ್ರದ ತಂತ್ರಿ ಕುಡುಪು ನರಸಿಂಹ ತಂತ್ರಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು ಸ್ವಾಗತಿಸಿದರು. ವಿ.ಜೆ.ವಿಖ್ಯಾತ್ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ ವಂದಿಸಿದರು.

ಅತೀ ಪುರಾತನ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಭಾಗಿಯಾಗುವುದು ನಮ್ಮ ಪುಣ್ಯ. ನಾವೆಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಬೇಕು. ಬೇರೆ ಧರ್ಮದವರನ್ನು ನಾವು ವಿರೋಧ ಮಾಡುತ್ತಿಲ್ಲ. ನಮ್ಮ ಮಕ್ಕಳಿಗೆ ಹಿಂದು ಧರ್ಮದ ಧಾರ್ಮಿಕ ಶಿಕ್ಷಣ ನೀಡಬೇಕು. ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಯಮಿ