ಜಿಲ್ಲೆ

ಕೊರಗ ಸಮಾಜದ ಅಭಿವೃದ್ಧಿಗೆ ವಿಶೇಷ ಆದ್ಯತೆ...

ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

ಸಮುದಾಯ ಭವನಕ್ಕೆ ಶಿಲಾನ್ಯಾಸ

ವಿಜಯವಾಣಿ ಸುದ್ದಿ ಉಡುಪಿ

ಕೊರಗ ಸಮಾಜದ ಅಭ್ಯುದಯಕ್ಕಾಗಿ ಅವರ ಎಲ್ಲ ಬೇಡಿಕೆ ಈಡೇರಿಸಲು ವಿಶೇಷ ಆದ್ಯತೆ ನೀಡಲಾಗುವುದು. ಆ ನಿಟ್ಟಿನಲ್ಲಿ 1 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತವಾದ ಸಮುದಾಯ ಭವನ ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಮುದಾಯದವರ ಅಭಿವೃದ್ಧಿಪರ ಕಾರ್ಯಕ್ರಮಗಳಿಗೆ ಈ ಭವನ ಸದುಪಯೋಗವಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹಾರೈಸಿದರು.

ಉಡುಪಿ ನಗರಸಭೆಯ ಇಂದ್ರಾಳಿ ವಾರ್ಡ್​ನ ಮಂಚಿ ಕೊರಗ ಕಾಲನಿಯಲ್ಲಿ ನಗರೋತ್ಥಾನ ಯೋಜನೆಯಡಿ ನಿಮಾರ್ಣಗೊಳ್ಳಲಿರುವ ಸಮುದಾಯ ಭವನಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ನಗರಸಭಾ ಸದಸ್ಯರಾದ ಅಶೋಕ್​ ನಾಯ್ಕ್​, ಬಾಲಕೃಷ್ಣ ಶೆಟ್ಟಿ, ಸುಮಿತ್ರಾ ನಾಯಕ್​, ಗಿರಿಧರ್​ ಆಚಾರ್ಯ, ಹರೀಶ್​ ಶೆಟ್ಟಿ, ಕಲ್ಪನಾ ಸುಧಾಮ, ಪಕ್ಷದ ಪ್ರಮುಖರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.