ಮೂಲರಪಟ್ಣದ ಜಿಎಚ್‌ಎಂ ಫೌಂಡೇಷನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಮನೆ ಕಾಮಗಾರಿಗೆ ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬ ಅಲ್ ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ ಶಂಕುಸ್ಥಾಪನೆ ನೆರವೇರಿಸಿದರು. 
ಜಿಲ್ಲೆ

ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ: ರಪಟ್ಣಜಿಎಚ್‌ಎಂ ಫೌಂಡೇಷನ್ ಕೊಡುಗೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಜಿಎಚ್‌ಎಂ ಫೌಂಡೇಷನ್ ಮೂಲರಪಟ್ಣ ವತಿಯಿಂದ ಬೈತುಲ್‌ಹುದಾ ಏಳನೇ ಯೋಜನೆಯಾಗಿ ನಿರ್ಮಾಣಗೊಳ್ಳುತ್ತಿರುವ ಮನೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಮೂಲರಪಟ್ಣದ ಆಝಾದ್ ನಗರದಲ್ಲಿ ನಡೆಯಿತು.

ಮೂಲರಪಟ್ಣ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬ ಅಲ್ ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ ದುವಾ ಬಳಿಕ ನೂತನ ಶಂಕುಸ್ಥಾಪನೆ ನೆರವೇರಿಸಿದರು. ಮಾಜಿ ಖತೀಬ ಅಲ್ ಹಾಜ್ ಅಬ್ದುಲ್ ಖಾದರ್ ಮದನಿ ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿದ್ದ ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ, ಜಿಎಚ್‌ಎಂ ಫೌಂಡೇಷನ್ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಫೌಂಡೇಷನ್ ಏಳು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಪೈಕಿ 3 ಮನೆಗಳನ್ನು ಈಗಾಗಲೇ ಪೂರೈಸಿ ನಾಲ್ಕನೇ ಮನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 3 ಹಳೇ ಮನೆಗಳನ್ನು ನವೀಕರಿಸಿ ಹೊಸ ರೂಪ ಕೊಡಲಾಗಿದೆ. ಜಿಎಚ್‌ಎಂ ಫೌಂಡೇಷನ್ ಶಿಕ್ಷಣಕ್ಕೆ ಪ್ರೇರಣೆ ನೀಡುವ ಕೆಲಸವನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಜಿಎಚ್‌ಎಂ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಶಾಲಿ ಅಧ್ಯಕ್ಷತೆ ವಹಿಸಿ ಫೌಂಡೇಷನ್‌ನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅಬ್ದುಲ್ ಸಲಾಂ, ಅಬ್ದುಲ್ ರಝಾಕ್ ಸಚ್ಚರಿಪೇಟೆ, ರಿಯಾಝ್ ಕುಪ್ಪೆಪದವು, ಜಿ.ಎಚ್.ಎಂ.ಫೌಂಡೇಷನ್‌ನ ಕಾರ್ಯಕ್ರಮ ಮುಖ್ಯಸ್ಥ ಎಂ.ಬಿ.ಇಸ್ಮಾಯಿಲ್ ಶಾಫಿ ಮೂಲರಪಟ್ಣ, ಸ್ಥಾಪಕಾಧ್ಯಕ್ಷ ಹಂಝ ಗುತ್ತು ಮೂಲರಪಟ್ಣ, ಗೌರವ ಸಲಹೆಗಾರ ಝಕರಿಯಾ ಫರ್ವೀಝ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸನ್ಮಾನ, ಕಾರ್ಯಾಗಾರ

ಜಿಎಚ್‌ಎಂ ಫೌಂಡೇಷನ್ ವತಿಯಿಂದ ಮೂಲರಪಟ್ಣ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪಾಲಕರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಕಾರ್ಯಾಗಾರ ನಡೆಸಿಕೊಟ್ಟರು. ಆಜಾದ್ ಮಾದರಿ ಶಾಲೆಯ ಪ್ರಾಂಶುಪಾಲೆ ಸುಪ್ರಿತಾ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಾಹಿನಾ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್.ಸ್ವಾಗತಿಸಿ ನಿರೂಪಿಸಿದರು.