ಶಿರ್ವ: ಇಲ್ಲಿನ ಹಿಂದು ಜೂನಿಯರ್ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಹಳೇ ವಿದ್ಯಾರ್ಥಿಗಳ ವತಿಯಿಂದ ಕೊಡುಗೆಯಾಗಿ ನೀಡಲ್ಪಡುವ ಉಪಾಹಾರ ಮಂದಿರ ಕಟ್ಟಡಕ್ಕೆ ಇತ್ತೀಚೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶೀಲಾನ್ಯಾಸ ನೆರವೇರಿಸಿದರು.
ಆಡಳಿತ ಅಧಿಕಾರಿ ವೈ.ಭಾಸ್ಕರ್ ಶೆಟ್ಟಿ, ಸಂಘದ ಅಧ್ಯಕ್ಷ ರಮಾನಂದ, ಸಲಹೆಗಾರ ರಾಜಗೋಪಾಲ್, ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಕಟ್ಟಡ ನಿರ್ಮಾಣ ಉಸ್ತುವಾರಿ ಕುತ್ಯಾರ್ ಪ್ರಸಾದ್ ಶೆಟ್ಟಿ, ಪ್ರಾಂಶುಪಾಲ, ಶಿಕ್ಷಕರು, ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.