ಜಿಲ್ಲೆ

ಗುರುಪುರ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ

Avinash R

ಗುರುಪುರ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮೂಳೂರು ಗ್ರಾಮದ ವಿಕಾಸನಗರದಲ್ಲಿ ಮಂಗಳವಾರ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡುಗೆಯಾಗಿ ನೀಡಿದ ಸ್ಥಳೀಯ ಉದ್ಯಮಿ ಜೆರಾಲ್ಡ್ ಲೋಬೊ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಮಂಗಳೂರು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶೈಲಾ ಕಾರಗಿ ಮಾತನಾಡಿ, ಇಲಾಖೆಯ 15 ಲಕ್ಷ ಹಾಗೂ ಗುರುಪುರ ಪಂಚಾಯಿತಿನ 5 ಲಕ್ಷ ರೂ(ಒಟ್ಟು 20 ಲ.ರೂ) ಅನುದಾನದಡಿ ನೂತನ ಅಂಗನವಾಡಿ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಗುರುಪುರ ಗ್ರಾಪಂ ಅಧ್ಯಕ್ಷೆ ಸಫರಾ ಎಂ., ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಸದಸ್ಯರಾದ ಯಶವಂತ ಶೆಟ್ಟಿ, ಸಚಿನ್ ಅಡಪ, ಜಿ.ಎಂ. ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ, ಬಬಿತಾ, ರಿಯಾಝ್, ಬುಶ್ರಾ, ರೆಹನಾ, ಮರಿಯಮ್ಮ, ಶಾಹಿಕ್, ಗುರುಪುರ ಪಿಡಿಒ ಪಂಕಜಾ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಮತ್ತು ಸಿಬ್ಬಂದಿ, ಪ್ರಮುಖರಾದ ಶ್ರೀಕರ ಶೆಟ್ಟಿ ಗುರುಪುರ, ಜಯರಾಮ ವಿಕಾಸನಗರ, ಅಂಗನವಾಡಿ ಕಾರ್ಯಕರ್ತೆ ಪವಿತ್ರಾ, ಗುತ್ತಿಗೆದಾರ ಸುನಿಲ್ ಕುಮಾರ್ ಉಪಸ್ಥಿತರಿದ್ದರು.