ಶಿರೂರು ಮೂರ್ಕೈ ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುದ್ದೂರು ಶಾಖೆಯ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಭೂಮಿಪೂಜೆ ಸೋಮವಾರ ಜರುಗಿತು.  
ಜಿಲ್ಲೆ

ಗ್ರಾಹಕರಿಗೆ ಉತ್ತಮ ಸೇವೆ ಗುರಿ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಸಂಘ ಈಗಾಗಲೇ ಮುಖ್ಯ ಕಚೇರಿಗೆ ಉತ್ತಮ ಸ್ವಂತ ಕಟ್ಟಡ ಹೊಂದಿದ್ದು, ಇದೀಗ ಶಾಖಾ ಕಟ್ಟಡಕ್ಕೂ ಸ್ವಂತ ನಿವೇಶನ, ಕಟ್ಟಡ ಹೊಂದುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇಡುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ಸಂಘದ ಗುರಿ ಎಂದು ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಶೇಡಿಕೊಡ್ಲು ಹೇಳಿದರು.

ಶಿರೂರು ಮೂರ್ಕೈ ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮುದ್ದೂರು ಶಾಖೆಯ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಭೂಮಿಪೂಜೆಯಲ್ಲಿ ಸೋಮವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಿಯ್ಯರು ರಾಮಚಂದ್ರ ಶಾಸ್ತ್ರಿ ಧಾರ್ಮಿಕ ವಿಧಿ ನೆರವೇರಿಸಿದರು. ಸ್ಥಳ ದಾನಿ ಸರೋಜ ಶೆಡ್ತಿ, ಮಾಜಿ ನಿರ್ದೇಶಕ ಬಾಬಣ್ಣ ನಾಯ್ಕ, ಸಂಸ್ಥೆ ಉಪಾಧ್ಯಕ್ಷ ಸಿದ್ಧಾರ್ಥ ನಾಯ್ಕ ಹಿಲಿಯಾಣ, ಸಂಘದ ನಿರ್ದೇಶಕರಾದ ಎಚ್.ಬೆಳ್ಳ ನಾಯ್ಕ ಕೊಕ್ಕರ್ಣೆ, ಜಯಪ್ರಕಾಶ ನಾಯ್ಕ ಯಡ್ತಾಡಿ, ದಿನೇಶ ನಾಯ್ಕ ಹೊರ್ಳಾಳಿ, ನರಸಿಂಹ ನಾಯ್ಕ ಯಡ್ತಾಡಿ, ವಸಂತ ನಾಯ್ಕ ಒಳಬೈಲು, ನರಸಿಂಹ ನಾಯ್ಕ ಯಡ್ತಾಡಿ, ಮಹಾದೇವ ಬಿಲ್ಲಾಡಿ, ಲಲಿತಾ ಬಿಲ್ಲಾಡಿ, ಪಾರ್ವತಿ ಗೋಳಿಯಂಗಡಿ ಮತ್ತಿತರರು ಉಪಸ್ಥಿತರಿದ್ದರು. ಸಿಇಒ ನರಸಿಂಹ ನಾಯ್ಕ ಮಂದಾರ್ತಿ ಸ್ವಾಗತಿಸಿದರು. ಸಿಬ್ಬಂದಿ ಕೃಷ್ಣ ನಾಯ್ಕ ನಿರೂಪಿಸಿದರು. ಗಣೇಶ ವಂದಿಸಿದರು.