ಜಿಲ್ಲೆ

ಸಂಸ್ಥಾಪನಾ ದಿನ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಹಿಂದು ಪರಿಷದ್​ ಸ್ಥಾಪನೆಯಾಗಿ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆ. 31ರಂದು ಸಂಜೆ 5 ಗಂಟೆಗೆ ಇಲ್ಲಿನ ಸೈದಾಪುರದ ಕಲ್ಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ವಿಶ್ವ ಹಿಂದು ಪರಿಷದ್​ ಸಂಸ್ಥಾಪನಾ ದಿನ ಹಾಗೂ ಷಷ್ಠಿ ಪೂರ್ತಿ ಸಮಾರಂಭ ಏರ್ಪಡಿಸಲಾಗಿದೆ.
ಧಾರವಾಡ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಯಾಗಿ ಶಂಕರ ಮತ್ತುರ ಆಗಮಿಸಲಿದ್ದು, ಮುಖ್ಯ ವಕ್ತಾರರಾಗಿ ವಿನಾಯಕ ತಲಗೇರಿ ಆಗಮಿಸಲಿದ್ದಾರೆ. ಬಸವರಾಜ ಕೌಜಲಗಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.