ಹುಬ್ಬಳ್ಳಿ: ನಗರದ ಚೇತನ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ 21ನೇ ಸಂಸ್ಥಾಪಕರ ದಿನವನ್ನು ಹಬ್ಬದಂತೆ ಆಚರಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ. ಮಹೇಶ ದ್ಯಾವಪ್ಪನವರ ಅವರ ಪಾಲಕರ ಭಾವಚಿತ್ರಕ್ಕೆ ನಮನ ಸಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ವಿವಿಧ ಶಾಖೆಗಳಾದ ರಾಜ್ಯ, ಸಿಬಿಎಸ್‌ಇ, ಐಸಿಎಸ್‌ಇ ಪಠ್ಯದ ಶಾಲೆಗಳು, ಚೇತನ ಕಾಲೇಜ್ ಮತ್ತು ಸಚೇತನ ಕಾಲೇಜ್‌ನ ಎಲ್ಲರೂ ಸೇರಿ ಸಂಭ್ರಮಿಸಿದರು.
ರಾಜ್ಯ ಪಠ್ಯಕ್ರಮ ಶಾಲೆಯ ಪ್ರಾಚಾರ್ಯ ಎಂ.ಎಂ. ಕರೇಗೌಡರ, ಶೈಕಣಿಕ ಸಲಹೆಗಾರರಾದ ಕುಂದಗೋಳ, ಸಿ.ಎಸ್. ಹಸಬಿ ಅವರು ಮಾತನಾಡಿ, 2004ರಿಂದ ಸಂಸ್ಥೆ ಬೆಳೆದು ಬಂದ ದಾರಿಯನ್ನು ಪರಿಚಯಿಸಿದರು.
ಸಿಬಿಎಸ್‌ಇ ಪಠ್ಯಕ್ರಮ ಶಾಲೆಯ ಪ್ರಾಚಾರ್ಯೆ ಡಾ. ಜೆರುಷಾ ನಡುಗಡ್ಡಿ, ಉಪ ಪ್ರಾಚಾರ್ಯೆ ರೂಪ ಪೈ, ಐಸಿಎಸ್‌ಇ ಪಠ್ಯಕ್ರಮ ಶಾಲೆಯ ಪ್ರಾಚಾರ್ಯೆ ಮಿಸೆಸ್ ಒಡ್ರಿ ಪ್ರಿನ್ಸ್ ಉತ್ತಂಗಿ, ಕಾಲೇಜ್ ಪ್ರಾಚಾರ್ಯ ಯಡಳ್ಳಿ ಅವರು ಸಂಸ್ಥಾಪಕ ಅಧ್ಯಕ್ಷ ಪ್ರೊ.ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ.ಮಹೇಶ ದ್ಯಾವಪ್ಪನವರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ದ್ಯಾವಪ್ಪನವರ, ನಮ್ಮೀ ಕಾಯಕಕ್ಕೆ ಬೆನ್ನೆಲುಬಾಗಿ ನಿಂತು ಹಾರೈಸಿದವರು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಗಳು. ನಾವು ಮಾಡಿದ ಕಾರ್ಯವನ್ನು ಪೋಸಿಸಿದವರು ನಮ್ಮ ಸಂಸ್ಥೆಯ ಸಿಬ್ಬಂದಿ ಎಂದು ಸ್ಮರಿಸಿದರು.
ಶಾಲಾ ಡಳಿತ ಮಂಡಳಿ ನಿರ್ದೇಶಕಿ ಸೌಮ್ಯ ವಳಸಂಗ ಇತರರು ಇದ್ದರು.