ಬಂಡಳ್ಳಿಯ ಶ್ರೀ ಕಾಳಿಕಾಂಭ ದೇಗುದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಭಾಗಿಯಾಗಿದ್ದರು. ಡಾ. ನಾಗಲಿಂಗಪ್ಪ, ಶಾಂತಮ್ಮ, ಶ್ರೀನಿವಾಸಮೂರ್ತಿ, ಕೆಂಪಣ್ಣಾಚಾರ್ ಇದ್ದರು.  
ಜಿಲ್ಲೆ

ಕಾಳಿಕಾಂಬ ದೇಗುಲದ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಕಾಳಿಕಾಂಬ ದೇಗುಲದ 26ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇಗಲದ ಕಳಸ ಸ್ಥಾಪನಾ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಭಾಗಿಯಾಗಿದ್ದರು.

ದೇಗುಲಕ್ಕೆ ಭೇಟಿ ನೀಡಿದ ಶಾಸಕರನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ದೇವರ ದರ್ಶನ ಪಡೆದ ಶಾಸಕರು ಹೋಮ ಹಾಗೂ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ಶ್ರದ್ಧಾಕೇಂದ್ರ. ಹಾಗಾಗಿ ಜನರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುತ್ತಾರೆ. ಈದಿೆಸೆಯಲ್ಲಿ ಗ್ರಾಮದಲ್ಲಿ ನಿರ್ಮಿಸಿರುವ ಕಾಳಿಕಾಂಬ ದೇಗುಲದಲ್ಲಿ ಎಲ್ಲರೂ ಒಟ್ಟುಗೂಡಿ 26ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಧಾರ್ಮಿಕತೆಯ ಪ್ರತೀಕ ಎಂದು ಮಂಜುನಾಥ್ ತಿಳಿಸಿದರು.

ವಿಶ್ವಕರ್ಮ ಸಂಘದ ಅಧ್ಯಕ್ಷ ಡಾ.ನಾಗಲಿಂಗಪ್ಪ, ಮುಖಂಡರಾದ ಕೆಂಪಣ್ಣಚಾರ್, ಶ್ರೀನಿವಾಸಮೂರ್ತಿ, ನಂಜುಂಡಸ್ವಾಮಿ, ಪ್ರಭುಸ್ವಾಮಿ, ಶಿವಮೂರ್ತಿ ಇತರರು ಇದ್ದರು.