ಮುದಗಲ್: ಪಟ್ಟಣದಲ್ಲಿನ ಐತಿಹಾಸಿಕ ಎರಡು ಸುತ್ತಿನ ಕೋಟೆಯ ಕಂದಕಕ್ಕೆ ಘನತ್ಯಾಜ್ಯ ಹಾಕಲಾಗುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಘನತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟನೆ
ರಾತೋರಾತ್ರಿ ತ್ಯಾಜ್ಯವನ್ನು ಸಾರ್ವಜನಿಕರ, ಅಂಗಡಿದಾರರು ಹಾಕುತ್ತಿದ್ದಾರೆ. ಆದರೂ ಪುರಸಭೆ ಅಧಿಕಾರಿಗಳ ಸುಮ್ಮನಾಗಿದ್ದಾರೆ. ಇದು ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇತಿಹಾಸ ಸಾರುವ ಮುದಗಲ್ ಕೋಟೆ ರಾಜ್ಯಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣದ ವೇಳೆ ವೀಕ್ಷಿಸಿ ಕೋಟೆ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತ್ಯಾಜ್ಯದಿಂದ ಹಂತ ಹಂತವಾಗಿ ಕೋಟೆ ಕಂದಕ ಮುಚ್ಚುವ ಹುನ್ನಾರ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಲ್ಲದೇ ತ್ಯಾಜ್ಯದಿಂದ ನೀರೆಲ್ಲಾ ಮಲಿನಗೊಂಡಿದೆ.
ದುರ್ವಾಸನೆ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನಿಸಿದಂತಾಗಿದೆ. ಕೂಡಲೇ ಪುರಸಭೆ ಇಲಾಖೆ ಅಧಿಕಾರಿಗಳು ಕೋಟೆ ಮತ್ತು ಕಂದಕದ ಸಂರಕ್ಷಣೆಗೆ ಮುಂದಾಗಬೇನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.
ಎರಡು ಸುತ್ತಿನ ಕೋಟೆ ಮುಂಭಾಗದಲ್ಲಿರುವ ಕಂದಕಕ್ಕೆ ತ್ಯಾಜ್ಯ ಎಸೆಯಬಾರದು. ಪ್ರತಿ ವಾರ್ಡ್‌ಗಳಿಗೂ ಬರುವ ಆಟೋಗಳಿಗೆ ತ್ಯಾಜ್ಯವನ್ನು ಜನರು ನೀಡಿ ಸಹಕರಿಸಬೇಕು. ಪರಿಸರ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ. ನರಸರೆಡ್ಡಿ ಪುರಸಭೆ ಮುಖ್ಯಾಧಿಕಾರಿ ಮುದಗಲ್