ಔಷಧ ಮಾರಾಟ ಪ್ರಚಾರದ ಉದ್ಯೋಗಿಗಳಿಗೆ ಶಾಸನಬದ್ಧ ಕೆಲಸದ ನಿಯಮ ರೂಪಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಗಳ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯಿ, ಪದಾಕಾರಿಗಳಾದ ರಾಜಶೇಖರ, ಮಾರೆಪ್ಪ, ತಿಮ್ಮಪ್ಪ, ರವಿ, ಕೃಷ್ಣ, ತೋಟಯ್ಯ, ಸಿರಾಜ್, ರ್ಇಾನ್, ಬಾಬಾ ಇದ್ದರು. 
ಜಿಲ್ಲೆ

ಶಾಸನಬದ್ಧ ಕೆಲಸದ ನಿಯಮ ರೂಪಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಔಷಧ ಮಾರಾಟ ಪ್ರಚಾರದ ಉದ್ಯೋಗಿಗಳಿಗೆ ಶಾಸನಬದ್ಧ ಕೆಲಸದ ನಿಯಮಗಳನ್ನು ರೂಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಗಳ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ಸರ್ಕಾರಿ ಆಸ್ಪತ್ರೆ, ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರತಿನಿಗಳ ಪ್ರದೇಶದ ಮೇಲಿನ ಪ್ರವೇಶದ ಎಲ್ಲ ನಿಬಂಧಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಔಷಧ ಮತ್ತು ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕಿ ಬೆಲೆ ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕು. ಮಾರಾಟಕ್ಕೆ ಸಂಬಂಸಿದಂತೆ ಸಂಸ್ಥೆಗಳ ಕಿರುಕುಳ ಮತ್ತು ಪ್ರತಿನಿಗಳನ್ನು ಬಲಿಪಶು ಮಾಡುವುದನ್ನು ತಡೆಗಟ್ಟಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯಿ, ಪದಾಕಾರಿಗಳಾದ ರಾಜಶೇಖರ, ಮಾರೆಪ್ಪ, ತಿಮ್ಮಪ್ಪ, ರವಿ, ಕೃಷ್ಣ, ತೋಟಯ್ಯ, ಸಿರಾಜ್, ರ್ಇಾನ್, ಬಾಬಾ ಇದ್ದರು.