ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದೇವರಾಜ ಅರಸು, ರಾಜೀವ್ ಗಾಂಧಿ ಭಾವಚಿತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಪುಷ್ಪಾರ್ಚನೆ ಮಾಡಿದರು. ಎನ್.ರಮೇಶ್, ಬಲ್ಕಿಷ್ ಬಾನು, ಎಚ್.ಎಂ.ಚಂದ್ರಶೇಖರಪ್ಪ, ಚಿನ್ನಪ್ಪ, ಇಕ್ಕೇರಿ ರಮೇಶ್ ಇತರರಿದ್ದರು. 
ಜಿಲ್ಲೆ

ಮಾಜಿ ಪ್ರಧಾನಿ, ಸಿಎಂ ಆಡಳಿತ ಸ್ಮರಣೀಯ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಭಾರತಕ್ಕೆ ಅಧುನಿಕ ಸ್ಪರ್ಶ ನೀಡಿದವರು ರಾಜೀವ್ ಗಾಂಧಿ. ಟೆಲಿಫೋನ್, ಕಂಪ್ಯೂಟರ್‌ಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ರಾಜೀವ್ ಗಾಂಧಿ ಪ್ರಯತ್ನ ಸ್ಮರಣೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಬಡ ಜನರ ಪಾಲಿಗೆ ದೇವರಾಜ ಅರಸು ಅವರು ಕಣ್ಮಣಿ ಆಗಿದ್ದವರು ಎಂದರು.
ಎಂಎಲ್‌ಸಿ ಬಲ್ಕಿಷ್ ಬಾನು ಮಾತನಾಡಿ, ದೇವರಾಜ ಅರುಸು ಅವರು ಇಂದಿರಾ ಗಾಂಧಿ ಅವರ 20 ಅಂಶದ ಕಾರ್ಯಕ್ರಮಗಳನ್ನು ಪರಿಪೂರ್ಣವಾಗಿ ಜಾರಿಗೆ ತಂದವರು. ಅದರಲ್ಲೂ ಜೀತ ಮತ್ತು ಮಲಹೊರುವ ಪದ್ಧತಿ ನಿಷೇಧಿಸಿದ್ದರು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಅರಸು ಮಾದರಿ ರಾಜಕಾರಣಿ. ಸಣ್ಣ ಜಾತಿಗಳಿಗೆ ಸೌಲಭ್ಯ ತಲುಪಿಸಿದವರು. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಸಹ ಅರಸು ಅವರ ಗರಡಿಯಲ್ಲೇ ಬೆಳೆದವರಾಗಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಇಕ್ಕೇರಿ ರಮೇಶ್, ಎನ್.ಉಮಾಪತಿ, ಎಸ್.ಟಿ.ಹಾಲಪ್ಪ, ಸಿ.ಎಚ್.ಚಂದ್ರಭೂಪಾಲ, ಜಿ.ಡಿ.ಮಂಜುನಾಥ್, ಶರತ್ ಮರಿಯಪ್ಪ, ಎಸ್.ಪಿ.ಶೇಷಾದ್ರಿ, ಎಂ.ಎಸ್.ಸಿದ್ದಪ್ಪ, ಯು.ಶಿವಾನಂದ್, ಮೋಹನ್, ನಾಜೀಮಾ, ಸ್ಟೆಲ್ಲಾ ಮಾರ್ಟಿನ್ ಇತರರಿದ್ದರು.