ಜಿಲ್ಲೆ

ಕ್ಯಾತಮಾರನಹಳ್ಳಿಯಲ್ಲಿ ಮತ್ತೆ ಮಸೀದಿ ಬಾಗಿಲು ತೆರೆಯಲು ಬಿಡುವುದಿಲ್ಲ : ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ

ಮೈಸೂರು: ಕ್ಯಾತಮಾರನಹಳ್ಳಿಯಲ್ಲಿ ಬಂದ್ ಆಗಿರುವ ವಿವಾದಿತ ಮಸೀದಿಯ ಬಾಗಿಲು ತೆಗೆಸಲು ರಾಜ್ಯ ಸರ್ಕಾರ ಯತ್ನಿಸುತ್ತಿದ್ದು, ಅನಧಿಕೃತ ಮಸೀದಿಯನ್ನು ಮತ್ತೆ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾಲಿಬಾನಿ ಸರ್ಕಾರ ಇರುವ ಕಾರಣ ಇಂತಹ ಪ್ರಯತ್ನವನ್ನು ಮುಸ್ಲಿಂ ಮುಖಂಡರು ಆರಂಭಿಸಿದ್ದಾರೆ. ರಾಜು ಹತ್ಯೆ ಬಳಿಕ ಈ ಮಸೀದಿ ಬಂದ್ ಆಗಿತ್ತು. ಅನಧಿಕೃತವಾಗಿ ನಿರ್ಮಾಣ ವಾದ ಮಸೀದಿಯನ್ನು ಮತ್ತೆ ತೆರೆಯಲು ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದರು.

ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಮಾಡಿರುವುದು ತಪ್ಪು. ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಜಿಲ್ಲಾಧಿ ಕಾರಿ ಸಭೆ ಕರೆದಿದ್ದು, ಪೂರಕವಾದ ದಾಖಲೆಗಳನ್ನು ತೆಗೆದುಕೊಂಡು ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ದಾಖಲೆಯನ್ನು ನಾವು ಏತಕ್ಕೆ ಕೊಡಬೇಕು? ಜಿಲ್ಲಾಡಳಿತವೇ ದಾಖಲೆಯನ್ನು ಬಹಿರಂಗ ಪಡಿಸಲಿ. ಸರ್ಕಾರದ ಉದ್ದೇಶವೇನು? ನಿಮಗೆ ಸಾಬ್ರು ವೋಟ್ ಬಿಟ್ಟರೆ ಬೇರೆಯವರ ವೋಟ್ ಬೇಡವಾ? 5 ವರ್ಷ ಏನೂ ಮಾಡಕ್ಕಾಗಲ್ಲ ಅಂದುಕೊಂಡಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.