ಮಾನ್ವಿ ಬಸವ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಮಾನ್ವಿ ಮಂಡಲ ಯುವ ಮೋರ್ಚಾ ವತಿಯಿಂದ ಹರ್‌ಘರ್ ತಿರಂಗಾ ಯಾತ್ರೆಗೆ ಮಾಜಿ ಶಾಸಕ ಗಂಗಾಧರ ನಾಯಕ ಚಾಲನೆ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ವೀರಭದ್ರಗೌಡ ಭೋಗವತಿ, ಸಂತೋಷಕುಮಾರ ಮಾಡಗಿರಿ, ಮಂಜುನಾಥ ನಾಯಕ ಇದ್ದರು. 
ಜಿಲ್ಲೆ

ಆ.15 ರವರೆಗೆ ಹರ್‌ಘರ್ ತಿರಂಗಾ

ಪ್ರವೀಣ ಉದುಸಾ ದಲಬಂಜನ್

ಮಾನ್ವಿ: ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ಹಾಗೂ ಗೌರವ ಮೂಡಿಸುವ ಉದ್ದೇಶದಿಂದ ಆ.13 ರಿಂದ ಆ.15 ರವರೆಗೆ ಹರ್‌ಘರ್ ತಿರಂಗಾ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.

ಪಟ್ಟಣದ ಬಸವವೃತ್ತದಲ್ಲಿ ಬುಧವಾರ ಭಾರತೀಯ ಜನತಾ ಪಾರ್ಟಿ ಮಾನ್ವಿ ಮಂಡಲ, ಯುವ ಮೋರ್ಚಾದಿಂದ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಹಮ್ಮಿಕೊಂಡ ಹರ್‌ಘರ್ ತಿರಂಗಾ ಹಾಗೂ ಬೃಹತ್ ಬೈಕ್ ರ‌್ಯಾಲಿ ಮತ್ತು ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಮಂಡಲವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹರ್‌ಘರ್ ತಿರಂಗಾ ಕಾರ್ಯಕ್ರಮದ ಅಡಿಯಲ್ಲಿ ಮನೆಗಳ ಮೇಲೆ ತ್ರಿವರ್ಣ ಧ್ವಜಗಳನ್ನು ಹಾರಿಸಲಾಗುವುದು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ವೀರಭದ್ರಗೌಡ ಭೋಗವತಿ, ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಶರಣಪ್ಪ ನಕ್ಕುಂದಿ, ವಿಶ್ವನಾಥ ರಾಯಪ್ಪ, ಗುರುಸಿದ್ದಪ್ಪ ಕಣ್ಣೂರು, ಅಯ್ಯಪ್ಪನಾಯಕ ಮ್ಯಾಕಲ್, ಶರಣಯ್ಯಸ್ವಾಮಿ ಇನ್ನಿತರರು ಇದ್ದರು.