ಹುಣಸೂರಿನಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ 57ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಡಗರದಿಂದ ಆಚರಿಸಿದರು. 
ಜಿಲ್ಲೆ

ಮಾಜಿ ಶಾಸಕ ಮಂಜುನಾಥ್ ಹುಟ್ಟುಹಬ್ಬ

ಅಭಿನಯ್ ಎಚ್.ಎಂ

ಹನಗೋಡು: ಹುಣಸೂರು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ 57ನೇ ಜನ್ಮ ದಿನವನ್ನು ಅವರ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುರ ಜತೆಗೆ ಗೋ ಶಾಲೆಗಳಲ್ಲಿನ ಜಾನುವಾರುಗಳಿಗೆ ಮೇವು ಒದಗಿಸಿ ಸರಳವಾಗಿ ಆಚರಿಸಿದರು.

ಹುಣಸೂರು ನಗರದ ಸಾಯಿಬಾಬಾ ಮಂದಿರ ಹಾಗೂ ಮುನೇಶ್ವರ ದೇವಾಲಯಕ್ಕೆ ಭಾನುವಾರ ಬೆಳಗ್ಗೆ ಮಂಜುನಾಥ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಾವಾಡಗೆರೆಯ ಗುರುಲಿಂಗ ಜಂಗಮದೇವ ಮಠಕ್ಕೆ ಒಂದು ಲೋಡ್ ಹಾಗೂ ಬೆಂಗಳೂರಿನ ನಿಶಾ ಫೌಂಡೇಷನ್‌ನ ಗೋವು ಶಾಲೆಗೆ ಒಂದು ಲೋಡ್ ಒಣ ಹುಲ್ಲಿನ ಮೇವು ನೀಡಿದರು. ಬಳಿಕ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದೆ ಪ್ರೇಮ್ ಕುಮಾರ್ ತಾಯಿ ರತ್ನಮ್ಮ ಅವರ ಆಶೀರ್ವಾದ ಪಡೆದರು. ನಂತರ ಮಂದಿರದ ಆವರಣದಲ್ಲಿ ಮಂಜುನಾಥ್ ಅವರ ಅಭಿಮಾನಿಗಳು ಭಾರಿ ಗಾತ್ರದ ಸೇಬಿನ ಹಾರ, ಗುಲಾಬಿ ಹಾಗೂ ಮಲ್ಲಿಗೆ ಹಾರ ಹಾಕಿ, ಕೇಕ್ ಕತ್ತರಿಸಿ ಶುಭಾಶಯ ಕೋರಿದರು.

ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ್, ಪಕ್ಷದ ಅಧ್ಯಕ್ಷರಾದ ನಾರಾಯಣ್, ಕಲ್ಕುಣಿಕೆ ರಮೇಶ್, ಕಾರ್ಯಾಧ್ಯಕ್ಷ ಪುಟ್ಟರಾಜ್, ಮುಖಂಡರಾದ ಡಿ.ಕೆ.ಕುನ್ನೇಗೌಡ, ಎ.ಪಿ.ಸ್ವಾಮಿ ಬಿಳಿಕೆರೆ ಬಸವರಾಜ್, ಡಾ.ವೃಷಭೇಂದ್ರ ಸ್ವಾಮಿ, ಜಯರಾಂ, ಉದ್ಯಮಿಗಳಾದ ನಾಡಪ್ಪನಹಳ್ಳಿ ರಾಜು ಶಿವರಾಜೇಗೌಡ, ಟಿ.ಕೃಷ್ಣ, ಅಜ್ಗರ್ ಪಾಷಾ, ಬಿಳಿಕೆರೆ, ಪ್ರೇಮ್ ಕುಮಾರ್, ಗುಂಡ ರವಿ, ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಚಿಕ್ಕಸ್ವಾಮಿ, ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ನೇರಳಕುಪ್ಪೆ ಮಹದೇವ್, ತಾಪಂ ಮಾಜಿ ಸದಸ್ಯೆ ರೂಪ ನಂದೀಶ್ , ಶಾಂತಾ ರಮೇಶ್, ಜಯಲಕ್ಷ್ಮೀ, ಕುಪ್ಪುಸ್ವಾಮಿ, ವೆಳ್ಳಂಗಿರಿ, ಮುದಗನೂರು ಗಣೇಶ್, ಕಚುವಿನಹಳ್ಳಿ ಲೋಕೇಶ್, ಬಿ ಆರ್ ಕಾವಲ್ ನಂದೀಶ್ ಸೇರಿದಂತೆ ಹಲವರು ಹಾಜರಿದ್ದರು. ಆನೆ, ಜಿರಾಫೆ ದತ್ತು ಪಡೆದ ಮಗಳು

ಮಂಜುನಾಥ್ ಅವರ 57ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಪುತ್ರಿ ಲಕ್ಷ್ಮೀಮಾನಸಾ ಮೈಸೂರಿನ ಮೃಗಾಲಯದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಮ್ಮುಖದಲ್ಲಿ ಒಂದು ಆನೆ ಹಾಗೂ ಜಿರಾಫೆಯನ್ನು ದತ್ತು ಪಡೆದರು. ಈ ವೇಳೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಮೃಗಾಲಯ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಅನೇಕರು ಇದ್ದರು.

ಬಿಳಿಕೆರೆಯಲ್ಲೂ ಆಚರಣೆ: ಬಿಳಿಕೆರೆಯಲ್ಲಿ ಸ್ನೇಹಜೀವಿ ಅಭಿಮಾನಿಗಳು ಮಂಜುನಾಥ್ ಅವರಿಗೆ ಭಾರಿ ಗಾತ್ರದ ಹಾರ ಹಾಕಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಬಿಳಿಕೆರೆ ಪ್ರೇಮ್ ಕುಮಾರ್, ಬಾಬು, ಚೌಡಪ್ಪ ಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.