ಜಿಲ್ಲೆ

ಬಿಜೆಪಿ ಕಾರ್ಯಕರ್ತರ ಪಕ್ಷವಾಗಿ ಉಳಿದಿಲ್ಲ: ಸೊಗಡು ಶಿವಣ್ಣ

ತುಮಕೂರು: ಬಿಜೆಪಿ ಕಾರ್ಯಕರ್ತರ ಪಕ್ಷವಾಗಿ ಉಳಿದಿಲ್ಲ. ವರ್ಕರ್ಸ್‌ ಪಾರ್ಟಿ ಆಗಿದೆ. 2013ರಲ್ಲೇ ಬಿಜೆಪಿಯನ್ನು ಕೆಲವರು ಹೈಜಾಕ್ ಮಾಡಿಬಿಟ್ಟಿದ್ದು ಜಾತಿ ದೇವರುಗಳ ಆರ್ಭಟವೇ ಜೋರಾಗಿದೆ. ನಿಷ್ಠಾವಂತರಿಗೆ ಅಲ್ಲಿ ಜಾಗವಿಲ್ಲ ಎಂದು ಮಾಜಿ ಸಚಿವ ಸೊಗಡುಶಿವಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇನಾಮಿ ಆಸ್ತಿ ಮಾಡಿರುವರು ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು ಆಸ್ತಿ ಮಾರಿ ಸಾಲ ತೀರಿಸುವೆ. ಮಲ್ಲಸಂದ್ರದವರೆಗೆ ಕೈಗಾರಿಕಾ ಪ್ರದೇಶ ವಿಸ್ತರಿಸಲು ಮುಂದಾಗಿದ್ದು ಇದರ ಹಿಂದೆ ಬೇನಾಮಿ ಆಸ್ತಿ ಮಾಡಿಕೊಂಡಿರುವರ ಹುನ್ನಾರ ಇದೆ ಎಂದು ದೂರಿದರು.

ಸಚಿವದ್ವಯರಿಗೆ ಪತ್ರ: ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಲ್ಲಿ ಕಳೆದ 2-3 ತಿಂಗಳುಗಳ ಹಿಂದೆ 26 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯ ಇದೀಗ 18 ಟಿಎಂಸಿ ನೀರು ಜಲಾಶಯದಲ್ಲಿದ್ದು 4 ಟಿಎಂಸಿ ಡೆಡ್‌ಸ್ಟೋರೇಜ್ ಕಳೆದು 14 ಟಿಎಂಸಿ ನೀರು ಬಳಕೆಗೆ ಲಭ್ಯವಿರುತ್ತದೆ. ಹಾಗಾಗಿ, ಕುಡಿಯುವ ನೀರಿನ ತತ್ವಾರ, ರೈತರಿಗೆ ಕೃಷಿ, ಜಾನುವಾರುಗಳು, ಅಂತರ್ಜಲ ವೃದ್ಧಿಯ ಸಂಬಂಧಿಸಿದ ಚಟುವಟಿಕೆಗಳಿಗೆ ಈ ವರ್ಷದ ನಮ್ಮ ಪಾಲಿನ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಶಿವಣ್ಣ ತಿಳಿಸಿದರು.