ಜಿ.ವೆಂಕಟೇಶ್ 
ಜಿಲ್ಲೆ

ಅಪಘಾತದಲ್ಲಿ ತಾಪಂ ಮಾಜಿ ಸದಸ್ಯ ಸಾವು

ರುದ್ರಪ್ಪ ವಾಲಿ

ಸಂಡೂರು: ತಾಪಂ ಮಾಜಿ ಸದಸ್ಯ ಯಶವಂತನಗರ ನಿವಾಸಿ ಜಿ.ವೆಂಕಟೇಶ್(56) ಅವರು ಚಲಾಯಿಸುತ್ತಿದ್ದ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಂಡ್ರಿ ಗ್ರಾಮದ ಬಳಿಯ ಸನ್ಯಾಸಿ ಗುಡ್ಡದ ಹಳ್ಳದ ಹತ್ತಿರ ಘಟನೆ ನಡೆದಿದೆ. ಪತ್ನಿ ಜಿ.ಭಾಗ್ಯ ನೀಡಿದ ದೂರಿನ ಮೇರೆಗೆ ಚೋರನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.