ಅ.2ರ ಕಾರ್ಯಕ್ರಮಕ್ಕೆ ಆಹ್ವಾನಿಸಿದ ವಿಡಿಯೋ ವೈರಲ್ ಬಿಡದಿ ಪಟ್ಟಣದಲ್ಲಿ ಆ.2ರಂದು ಆಯೋಜನೆಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು ಆಗಮಿಸಬೇಕು ಎಂದು ಜೆಡಿಎಸ್ ಮಾಜಿ ಶಾಸಕ ಎ.ಮಂಜುನಾಥ್ ಗಣವೇಷ ಧರಿಸಿ ವಿಡಿಯೋ ಮೂಲಕ ಕರೆ ನೀಡಿದ್ದು, ಕ್ಷೇತ್ರದಲ್ಲಿ ಹೊಸ ರಾಜಕೀಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂ ಸ್ಥಾಪನೆಯಾಗಿ ಅಕ್ಟೋಬರ್ 2ಕ್ಕೆ 100 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಅಂದು ಬಿಡದಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು ಗಣವೇಷಧಾರಿಗಳಾಗಿ ಬರಬೇಕು ಎಂದು ಮಂಜುನಾಥ್ ವಿಡಿಯೋದಲ್ಲಿ ತಿಳಿಸಿದ್ದಾರೆ. ಗಣವೇಷಧರಿಸಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತಂತೆ ವಿಜಯವಾಣಿಯೊಂದಿಗೆ ಮಾತಾನಾಡಿದ ಎ.ಮಂಜುನಾಥ್, ಇದೊಂದು ಐತಿಹಾಸಿಕ ಕಾರ್ಯಕ್ರಮ. ಒಂದು ರಾಷ್ಟ್ರೀಯ ಸಂ ಶತಮಾನ ಪೂರೈಸುತ್ತಿದ್ದು, ಈ ಸಂಭ್ರಮದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಿ ಎಂದು ಸಾಮಾನ್ಯ ವ್ಯಕ್ತಿಯಾಗಿ ಮನವಿ ಮಾಡಿದ್ದೇನೆ ಹೊರತು ಇದರಲ್ಲಿ ಯಾವುದೇ ಚರ್ಚೆಗೆ ಗ್ರಾಸವಾಗುವ ವಿಚಾರಗಳಿಲ್ಲ. ನಾನು ಗಣವೇಷಧರಿಸಿದ್ದಕ್ಕೆ ಹೆಚ್ಚಿನ ಮಹತ್ವ ಕೊಡುವುದೂ ಬೇಡ ಎಂದಿದ್ದಾರೆ.