ಶ್ರೀನಿವಾಸಪುರ: ದಿ.ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನಪರ ಆಡಳಿತ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅನೇಕ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ಮತ್ತು ಗೌರಕ್ಕೆಪಾತ್ರರಾಗಿದ್ದಾರೆ ಎಂದು ತಹಸೀಲ್ದಾರ್ ಜಿ.ಎನ್. ಸುಧೀಂದ್ರ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಸಂಖ್ಯಾಬಲಕ್ಕೆ ಆದ್ಯತೆ ಸಹಜ. ಆದರೆ ದೇವರಾಜ ಅರಸು ಅವರು ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದರು. ಸಂಕಲ್ಪ ಶುದ್ಧಿ ಹಾಗೂ ಉತ್ತಮ ವ್ಯಕ್ತಿತ್ವ ಅರಸು ಅವರ ಯಶಸ್ಸಿಗೆ ಕಾರಣವಾಗಿದ್ದವು. ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಭೂ ಸುಧಾರಣೆ ಇತಿಹಾಸವನ್ನೇ ಸೃಷ್ಟಿಸಿತು. ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಯಿಂದಾಗಿ ಭೂರಹಿತ ಗೇಣಿದಾರರು ಭೂಮಿ ಪಡೆಯಲು ಸಾಧ್ಯವಾಯಿತು ಎಂದರು.
ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಮೋಹನಾಚಾರಿ, ಗಾಣಿಗ ಸಮುದಾಯದ ಮುಖಂಡ ಎಂ.ಶ್ರೀನಿವಾಸ್, ಮಡಿವಾಳ ಸಂಘದ ಮುಖಂಡ ಮಂಜು, ಕರಬರ ಸಂಘ ಮುಖಂಡ ಮಂಜು, ನೇಕಾರರ ಸಂಘದ ಮುಖಂಡ ಎಸ್.ಎನ್.ಶಂಕರ್, ಗೊಲ್ಲ ಸಮುದಾಯ ಮುಖಂಡ ಆಟೋ ಜಗದೀಶ್, ತಾಲೂಕು ಕಚೇರಿ ಸಿಬ್ಬಂದಿ ಎಚ್.ಎಸ್.ಅಭಿಷೇಕ್, ಹಿಂದುಳಿದ ವರ್ಗಗಗಳ ಹಾಸ್ಟೆಲ್ ಮೇಲ್ವಿಚಾರಕರಾದ ಕಲ್ಪನಾ, ಎಸ್.ರಾಜೇಶ್ವರಿ, ವರಲಕ್ಷಿ$್ಮ, ರವಣಪ್ಪ, ಮಂಜುನಾಥ್ ಇದ್ದರು.